ಸುದೀಪ್ ಎಚ್ಚರಿಕೆ ನೀಡಿದ ಮೇಲೂ ಚೈತ್ರಾ ಕುಂದಾಪುರನ ಉದ್ಧಟತನ


ಸುದೀಪ್ ಎಚ್ಚರಿಕೆ ನೀಡಿದ ಮೇಲೂ ಚೈತ್ರಾ ಕುಂದಾಪುರನ ಉದ್ಧಟತನ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರ ಉದ್ಧಟತನದ ವರ್ತನೆಗೆ ಸುದೀಪ್ ಎಚ್ಚರಿಕೆ ನೀಡಿದರೂ, ಅವರು ತಮ್ಮನ್ನು ಸಮರ್ಥಿಸಿಕೊಂಡು ಮುಂದುವರಿಸಿದ್ದಾರೆ.
ಜಗದೀಶ್ ವಿರುದ್ಧ ಚೈತ್ರಾ ಆಡಿದ "ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..." ಎಂಬ ಮಾತು ತೀವ್ರ ವಿರೋಧಕ್ಕೆ ಕಾರಣವಾಯಿತು. ಸುದೀಪ್ ಅವರು ಹೆಣ್ಮಕ್ಕಳಿಗೆ ಗೌರವ ಕೊಡಬೇಕೆಂದು ಹೇಳಿದರೂ, ಚೈತ್ರಾ ಕ್ಷಮೆ ಕೇಳಿ, ತಕ್ಷಣವೇ ಮತ್ತೆ ಸಮರ್ಥನೆ ಮಾಡಲು ಮುಂದಾದರು.
ಸುದೀಪ್ ಅವರು ಚೈತ್ರಾಳ ಮಾತನಾಡುವ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದು, ಇನ್ನಷ್ಟು ಜಾಗೃತೆಯಾಗುವಂತೆ ಹೇಳಿದರೂ, ಚೈತ್ರಾ ವಾದವನ್ನು ಮುಂದುವರಿಸಿದ ಕಾರಣ, ಮನೆಯಲ್ಲಿ ಇವರ ವರ್ತನೆಗೆ ಸಂಬಂಧಿಸಿದ ಚರ್ಚೆ ಹೆಚ್ಚಾಗಿದೆ.