ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ‘ನನ್ನವ’ ಎಂದು ಬರೆದ ಕಾವ್ಯಾ ಶಾಸ್ತ್ರಿ – ಯಾರದು ಆ ಮಿಸ್ಟರಿ ಹುಡುಗ?


ಕನ್ನಡದ ನಟಿ, ನಿರೂಪಕಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 4 ಮಾಜಿ ಸ್ಪರ್ಧಿ ಕಾವ್ಯಾ ಶಾಸ್ತ್ರಿ ತಮ್ಮ ಮದುವೆಯಾಗಲಿರುವ ಹುಡುಗನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುವ ಕಾವ್ಯಾ, ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ತಮ್ಮ ಕೈ ಹಿಡಿದಿರುವ ಹುಡುಗನ ಫೋಟೋ ಹಂಚಿಕೊಂಡಿದ್ದು, ಅದಕ್ಕೆ “ನನ್ನವ” ಎಂಬ ಕ್ಯೂಟ್ ಕ್ಯಾಪ್ಷನ್ ನೀಡಿದ್ದಾರೆ.
ಆದರೆ, ಆತನ ಹೆಸರು ಅಥವಾ ಹಿನ್ನೆಲೆಯನ್ನು ಅವರು ಬಹಿರಂಗಪಡಿಸಿಲ್ಲ. ಇದಾದರೂ ಅಭಿಮಾನಿಗಳು ಹಾಗೂ ಸಿನಿ ಸ್ನೇಹಿತರು ಅಭಿನಂದನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಫೋಟೋದಲ್ಲಿ ಮುದ್ದಾದ ನಗುವಿನಲ್ಲಿ ಕಾಣಿಸಿಕೊಂಡಿರುವ ಕಾವ್ಯಾ ಅವರ ಸಂಭ್ರಮ ಎಲ್ಲರ ಮನ ಸೆಳೆಯುತ್ತಿದೆ.
ಕಾವ್ಯಾ ಶಾಸ್ತ್ರಿ “ಜಾನಕಿ ಸಂಸಾರ” ಧಾರಾವಾಹಿ ಮೂಲಕ ಕಿರುತೆರೆಗೆ ಮರಳಿ ಬಂದರು. ಜೊತೆಗೆ ಚೆಲುವೆಯೇ ನಿನ್ನ ನೋಡಲು, ಯುಗ, ಲವ್ 360 ಸೇರಿದಂತೆ ಹಲವಾರು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ವಿಚಾರಗಳಿಂದ ಹಿಡಿದು ಪೌರಾಣಿಕ ಕಥೆಗಳವರೆಗೂ ಅವರು ಶೇರ್ ಮಾಡುವ ವಿಡಿಯೋಗಳು ಸಹ ಜನಪ್ರಿಯವಾಗಿವೆ.
ಕಾವ್ಯಾ ಶಾಸ್ತ್ರಿಯ ಮದುವೆ ಕುರಿತ ಕುತೂಹಲ ಇನ್ನೂ ಹೆಚ್ಚಿರುವ ನಡುವೆ, ಅವರ ಜೀವನದ ಹೊಸ ಅಧ್ಯಾಯಕ್ಕೆ ಅಭಿಮಾನಿಗಳ ಹಾರೈಕೆಗಳು ಹರಿದು ಬರುತ್ತಿವೆ.