Back to Top

ಬಿಗ್‌ಬಾಸ್ ಸೀಸನ್ 12 ಫಸ್ಟ್ ಪ್ರೋಮೋ ರಿಲೀಸ್ – ವೀಕ್ಷಕರಿಗೆ ಸ್ವಾತಂತ್ರ್ಯ ದಿನದ ಸರ್ಪ್ರೈಸ್

SSTV Profile Logo SStv August 16, 2025
ಬಿಗ್‌ಬಾಸ್ ಸೀಸನ್ 12 ಫಸ್ಟ್ ಪ್ರೋಮೋ ರಿಲೀಸ್
ಬಿಗ್‌ಬಾಸ್ ಸೀಸನ್ 12 ಫಸ್ಟ್ ಪ್ರೋಮೋ ರಿಲೀಸ್

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಇದೀಗ ತನ್ನ 12ನೇ ಸೀಸನ್‌ಗಾಗಿ ಸಜ್ಜಾಗಿದೆ. ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿನ್ನೆ (ಆಗಸ್ಟ್ 15 – 79ನೇ ಸ್ವಾತಂತ್ರ್ಯ ದಿನ) ತಂಡ ಸರ್ಪ್ರೈಸ್ ನೀಡಿದ್ದು, ಮೊದಲ ಪ್ರೋಮೋ ಬಿಡುಗಡೆ ಮಾಡಿದೆ.

ಹೊಸ ಪ್ರೋಮೋದಲ್ಲಿ ಲೋಗೋ ಲಾಂಚ್ ಆಗಿದ್ದು, "ಕಾದಿದ್ದು ಸಾಕು! ಬಿಗ್‌ಬಾಸ್ ಇಸ್ ಬ್ಯಾಕ್! ಆದ್ರೆ... ಈ ಸಲ ಕಿಚ್ಚು ಮಾತ್ರ ಹೆಚ್ಚು!" ಎಂದು ಬರೆಯಲಾಗಿದೆ. ಇದರಿಂದಲೇ ಸೀಸನ್ 12 ಇನ್ನಷ್ಟು ಹಾಟ್ ಆಗಿರಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ. ಕಳೆದ ಸೀಸನ್‌ನಲ್ಲಿ ಕಿಚ್ಚ ಸುದೀಪ್ ನಿರೂಪಣೆ ಮುಂದುವರಿಸುವುದಿಲ್ಲ ಎಂದು ಘೋಷಣೆ ಮಾಡಿದ್ದರೂ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮತ್ತೆ ಸೀಸನ್ 12ಕ್ಕೂ ಕಿಚ್ಚನವರೇ ನಿರೂಪಕರು.

ಸೀಸನ್ 12 ಯಾವಾಗ ಆರಂಭವಾಗಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸ್ಪರ್ಧಿಗಳ ಸಂಭಾವ್ಯ ಪಟ್ಟಿಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ.

ಹೀಗಾಗಿ, ಬಿಗ್‌ಬಾಸ್ ಅಭಿಮಾನಿಗಳು ಇನ್ನೂ ಸ್ವಲ್ಪ ದಿನ ಕಾದರೆ ಸಾಕು ಕಿಚ್ಚನ ಜತೆ ಹೊಸ ಡ್ರಾಮಾ, ಹೊಸ ಎಂಟ್ರಿ ಮತ್ತು ಹೊಸ ಸೀಸನ್ ಬರ್ತಿದೆ!