Back to Top

ನನ್ನ ಗುಣ ಡಿಸೈಡ್‌ ಮಾಡೋಕೆ ನೀನ್ಯಾವಳು ಐಶ್ವರ್ಯಾ ವಿರುದ್ಧ ಏಕವಚನದಲ್ಲೇ ರೊಚ್ಚಿಗೆದ್ದ ಮಾನಸ

SSTV Profile Logo SStv October 22, 2024
ಐಶ್ವರ್ಯಾ ವಿರುದ್ಧ ಏಕವಚನದಲ್ಲೇ ರೊಚ್ಚಿಗೆದ್ದ ಮಾನಸ
ಐಶ್ವರ್ಯಾ ವಿರುದ್ಧ ಏಕವಚನದಲ್ಲೇ ರೊಚ್ಚಿಗೆದ್ದ ಮಾನಸ
ನನ್ನ ಗುಣ ಡಿಸೈಡ್‌ ಮಾಡೋಕೆ ನೀನ್ಯಾವಳು ಐಶ್ವರ್ಯಾ ವಿರುದ್ಧ ಏಕವಚನದಲ್ಲೇ ರೊಚ್ಚಿಗೆದ್ದ ಮಾನಸ ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಈಗ ನಾಮಿನೇಷನ್‌ ಪ್ರಕ್ರಿಯೆ ಶುರುವಾಗಿದೆ. ಸ್ಪರ್ಧಿಗಳ ಮಧ್ಯೆ ವೈಮಸ್ಸು ಶುರುವಾಗಿದೆ. ಮಾನಸ ಮಾತಿ ಭರದಲ್ಲಿ ಐಶ್ವರ್ಯಾ ಅವರಿಗೆ ಏಕವಚನದಲ್ಲಿಯೇ ಬೈದಿದ್ದಾರೆ.ಮೊದಲಿಗೆ ತ್ರಿವಿಕ್ರಮ್‌ ಹಾಗೂ ಐಶ್ವರ್ಯಾ ಅವರು ಮಾನಸ ಅವರನ್ನು ನೇರವಾಗಿ ನಾಮಿನೇಟ್‌ ಮಾಡುತ್ತೇವೆ ಎಂದರು. ಕಾರಣ ಕೊಟ್ಟಿದ್ದು ಹೀಗೆ. ಮಾನಸ ಅವರು ಇಮೆಚ್ಯೂರ್‌ ಆಗಿದ್ದಾರೆ ಅಂತ ನಮಗೆ ಅನ್ನಿಸಿತು ಎಂದಿದ್ದಾರೆ.ಇದಕ್ಕೆ ಮಾನಸ ಅವರು ರೊಚ್ಚಿಗೆದ್ದು ನನ್ನ ಗುಣ ಡಿಸೈಡ್‌ ಮಾಡೋಕೆ ನೀನ್ಯಾವಳೆ? ಎಂದು ಏಕವಚನದಲ್ಲೇ ಕೂಗಿದ್ದಾರೆ. ಮಾತ್ರವಲ್ಲ ಐಶ್ವರ್ಯಾ ಅವರು ಯಾವಳೂ ಅಂತ ಆ ತರ ಎಲ್ಲ ಮಾತನಾಡಬೇಡಿ ಎಂದಿದ್ದಾರೆ.ಇನ್ನು ತ್ರಿವಿಕ್ರಮ್‌ ಅವರು ಉಗ್ರಂ ಮಂಜು ಬಗ್ಗೆ ಎಲ್ಲೋ ಕಾರ್ನರ್‌ ಆಗಿದ್ದಾರೆ ಎಂದು ಅನ್ನಿಸಿದೆ ಎಂದು ಅಭಿಪ್ರಾಯ ಹಂಚಿಕೊಂಡರು. ಎಲ್ಲಾ ಮಾತನಾಡಬೇಕು ಅನ್ನೋದು ಬಿಗ್‌ ಬಾಸ್‌ ರೂಲ್ಸ್‌ನಲ್ಲಿ ಇಲ್ಲ ಎಂದು ಮಂಜು ಅವರು ತಿರುಗುಬಾಣ ಕೊಟ್ಟರು.ಅಷ್ಟೇ ಅಲ್ಲ ತ್ರಿವಿಕ್ರಮ್‌ ಅವರು ಉಗ್ರಂ ಮಂಜು ಅವರಿಗೆ ರಂಜಿಸುತ್ತೀರಾ ಅಂತ ಈಗ ಸೈಲೆಂಟ್‌ ಆಗಿರೋ ತರ ಇದ್ದೀರಾ ಎಂದು ಹೇಳಿದರು. ಇನ್ನು ಮಂಜು ಕೂಡ ನಿಮ್ಮ ಹತ್ರ ಬಂದು ಬಕೆಟ್‌ ಹಿಡಿಯೋರು ಒಳ್ಳೆಯವರು ಅಂತ ಸನ್ನೆ ಮೂಲಕ ಪರೋಕ್ಷವಾಗಿ ಹೇಳಿದರು.ಇಂದು ಯಾರೆಲ್ಲ ನಾಮಿನೇಟ್‌ ಆಗಲಿದ್ದಾರೆ ಎನ್ನವುದು ಗೊತ್ತಾಗಲಿದೆ. ಮಾತ್ರವಲ್ಲ ವೀಕ್ಷಕರು ಕೂಡ ಪ್ರೋಮೋ ನೋಡಿ ತ್ರಿವಿಕ್ರಮ್‌ ಆಟ ಶುರುವಾದಂತಿದೆ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಮಾನಸ ಅವರು ಮನೆಯಿಂದ ಈ ವಾರ ಔಟ್‌ ಆಗಬೇಕು ಎಂದು ಕಮೆಂಟ್‌ ಮಾಡಿದ್ದಾರೆಬಿಗ್‌ ಬಾಸ್‌ ಮನೆಯಲ್ಲಿ ಸದ್ಯ ಟಾಸ್ಕ್‌ ವಿಚಾರವಾಗಿ ಸ್ಪರ್ಧಿಗಳ ನಡುವೆ ಮಾರಾಮಾರಿಯಾಗಿದೆ. ಆಟ-ಏಟಿನ ಪರಾಮರ್ಶೆಯಲ್ಲಿ ಮನೆಮಂದಿ ಇದ್ದಾರೆ. ಇದೀಗ ಟಾಸ್ಕ್‌ ವಿಚಾರವಾಗಿ ಭವ್ಯಾ, ತ್ರಿವಿಕ್ರಮ್‌ ಹಾಗೇ ಸುರೇಶ್‌, ಉಗ್ರಂ ಮಂಜು, ಅನುಷಾ ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡಿದ್ದಾರೆ.ಬಿಗ್‌ ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ನೀಡಿದ್ದರು. ಅದರಲ್ಲಿ ಸ್ಪರ್ಧಿಗಳು ದಿಂಬುಗಳಿಂದ ಹೀಗೆ ಹಲವು ವಸ್ತುಗಳಿಂದ ಆಟ ಆಡಿದ್ದಾರೆ. ಆಟದಲ್ಲಿ ಕ್ರೌರ್ಯವೇ ಎದ್ದು ಕಾಣಿಸುರುವಂತಿತ್ತು. ಶಿಶಿರ್ ಮತ್ತು ಉಗ್ರಂ ಮಂಜು ಕಿತ್ತಾಡಿಕೊಂಡು ಕೂಡ ಆಗಿದೆ.