'ನೀವು ಹೊರಗಡೆ ಚೆನ್ನಾಗಿ ಕಾಣಿಸಲ್ಲ' ಐಶ್ವರ್ಯಾ-ಮಾನಸಾ ಜಗಳ


'ನೀವು ಹೊರಗಡೆ ಚೆನ್ನಾಗಿ ಕಾಣಿಸಲ್ಲ' ಐಶ್ವರ್ಯಾ-ಮಾನಸಾ ಜಗಳ ‘ಬಿಗ್ ಬಾಸ್ ಕನ್ನಡ ಸೀಸನ್ 11’ ನಲ್ಲಿ ಮಾನಸಾ ಮತ್ತು ಐಶ್ವರ್ಯಾ ಸಿಂಧೋಗಿ ನಡುವೆ ಉಂಟಾದ ಜಗಳ ಸಾಕಷ್ಟು ಗಮನ ಸೆಳೆಯುತ್ತಿದೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಐಶ್ವರ್ಯಾ ಅವರು ಮಾನಸಾ ಅವರನ್ನು ನಾಮಿನೇಟ್ ಮಾಡಿದ ಕಾರಣಕ್ಕೆ, ಮಾನಸಾ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿದರು.
ಜಗಳದ ಸಂದರ್ಭದಲ್ಲಿ, ಮಾನಸಾ ಐಶ್ವರ್ಯಾಗೆ "ನೀನು ಯಾರು ನನ್ನನ್ನು ಸಮಾಧಾನ ಮಾಡಲು" ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಸಿಟ್ಟು ಬಂದ ಐಶ್ವರ್ಯಾ "ನೀವು ಹೊರಗಡೆ ಚೆನ್ನಾಗಿ ಕಾಣಿಸಲ್ಲ" ಎಂದು ನೇರವಾಗಿ ಹೇಳಿದ್ರು. ಮಾನಸಾ "ಕಾಣಿಸೋದು ಬೇಡ" ಎಂದು ಗಟ್ಟಿಯಾಗಿ ಪ್ರತಿಕ್ರಿಯಿಸಿದರು.
ಈ ಘಟನೆ ‘ಬಿಗ್ ಬಾಸ್’ ಮನೆಯೊಳಗೆ ಬಿಸಿಯಾದ ಚರ್ಚೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.