Back to Top

ಈ ಭಾರಿ ಡಾಲಿ ಧನಂಜಯ್ ಬರ್ತ್‌ಡೇ ಆಚರಣೆ ಇಲ್ಲ – ಕಾರಣ ಏನು?

SSTV Profile Logo SStv August 21, 2025
39ನೇ ಬರ್ತ್‌ಡೇ ಆಚರಿಸದಿರಲು ನಿರ್ಧರಿಸಿದ ಡಾಲಿ ಧನಂಜಯ್
39ನೇ ಬರ್ತ್‌ಡೇ ಆಚರಿಸದಿರಲು ನಿರ್ಧರಿಸಿದ ಡಾಲಿ ಧನಂಜಯ್

ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಆಗಸ್ಟ್ 23ರಂದು ತಮ್ಮ 39ನೇ ವಯಸ್ಸಿಗೆ ಕಾಲಿಡಲಿರುವ ಧನಂಜಯ್, ಪ್ರತಿವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ದೊಡ್ಡ ಸಂಭ್ರಮದಲ್ಲಿ ಆಚರಿಸುತ್ತಿದ್ದರು. ಆದರೆ ಈ ಬಾರಿ ಅವರ ನಿರ್ಧಾರ ಅಭಿಮಾನಿಗಳಿಗೆ ಸ್ವಲ್ಪ ನಿರಾಶೆ ತಂದಿದೆ.

ಧನಂಜಯ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಹೀಗೆ –
“ನನ್ನ ಪ್ರೀತಿಯ ಅಭಿಮಾನಿಗಳೇ, ಪ್ರತಿ ವರ್ಷ ನನ್ನ ಜನ್ಮದಿನ ನಿಮ್ಮ ಹಬ್ಬ. ನಿಮ್ಮ ಪ್ರೀತಿ, ನಿಮ್ಮ ಎನರ್ಜಿ, ನಿಮ್ಮ ಸಂಭ್ರಮ ನನ್ನ ಶಕ್ತಿ. ಆದರೆ ಈ ಬಾರಿ ನಾನು ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಿದ್ದೇನೆ. ಈ ಸಲ ನಿಮ್ಮ ಜೊತೆ ಇರಲಾಗದಿದ್ದರೂ, ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನಗೆ ಸಾಕು. ಮುಂದಿನ ಸಲ ಡಬ್ಬಲ್ ಸಂಭ್ರಮದೊಂದಿಗೆ ಆಚರಿಸೋಣ. ಲವ್ ಯೂ ಆಲ್ – ಡಾಲಿ” ಎಂದು ತಿಳಿಸಿದ್ದಾರೆ.

ಇದೇ ವೇಳೆ, ಇದು ಧನಂಜಯ್ ವಿವಾಹವಾದ ಬಳಿಕದ ಮೊದಲ ಜನ್ಮದಿನ. ಹೀಗಾಗಿ ಪತ್ನಿ ಧನ್ಯಾತ ಜೊತೆ ಎಲ್ಲಾದರೂ ಟ್ರಿಪ್ ಪ್ಲ್ಯಾನ್ ಮಾಡಿಕೊಂಡಿರಬಹುದು ಎಂಬ ಅಂದಾಜು ಮೂಡಿದೆ. ಇನ್ನೊಂದೆಡೆ, ಇತ್ತೀಚೆಗೆ ನಡೆದ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಅಭಿಮಾನಿಗಳ ಕಾಲ್ತುಳಿತ ಘಟನೆ ಕೂಡ ಹಲವಾರು ಸೆಲೆಬ್ರಿಟಿಗಳಲ್ಲಿ ಎಚ್ಚರಿಕೆ ಮೂಡಿಸಿದೆ. ಅದೂ ಧನಂಜಯ್ ಈ ಬಾರಿ ಅಭಿಮಾನಿಗಳನ್ನು ಸೇರಿಸಲು ಹಿಂದೇಟು ಹಾಕಿದ ಕಾರಣಗಳಲ್ಲಿ ಒಂದೆಂದು ಹೇಳಲಾಗುತ್ತಿದೆ.

ಧನಂಜಯ್ ಅವರು ‘ಟಗರು’ ಸಿನಿಮಾದಲ್ಲಿನ ‘ಡಾಲಿ’ ಪಾತ್ರದ ಮೂಲಕ ಅಪಾರ ಫೇಮ್ ಪಡೆದರು. ಬಳಿಕ ನಿರಂತರ ಹಿಟ್ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ. ಅವರ ಹುಟ್ಟುಹಬ್ಬವನ್ನು ಈ ಬಾರಿ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳದಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಳೆ ಸುರಿಯುತ್ತಿದೆ.

ಅಭಿಮಾನಿಗಳಿಗೆ ಸ್ವಲ್ಪ ನಿರಾಶೆ ಆಗಿದ್ದರೂ, ಡಾಲಿ ಧನಂಜಯ್ ಮುಂದಿನ ಬಾರಿ ಡಬ್ಬಲ್ ಎನರ್ಜಿ, ಡಬ್ಬಲ್ ಸಂಭ್ರಮದೊಂದಿಗೆ ಬರ್ತ್‌ಡೇ ಆಚರಿಸುವುದಾಗಿ ಭರವಸೆ ನೀಡಿದ್ದಾರೆ.