ಮೆಜೆಸ್ಟಿಕ್-2 ಚಿತ್ರೀಕರಣ ಮುಗಿದು ಡಿಸೆಂಬರ್ 26ಕ್ಕೆ ಬಿಡುಗಡೆ 126 ದಿನಗಳ ಚಿತ್ರೀಕರಣ 'ಮೆಜೆಸ್ಟಿಕ್-2' ಚಿತ್ರದ 126 ದಿನಗಳ ನಿರಂತರ ಶೂಟಿಂಗ್ ಯಶಸ್ವಿಯಾಗಿ ಮುಗಿದಿದ್ದು, ನಿರ್ದೇಶಕ ರಾಮು ಆಕ್ಷನ್-ಕಟ್ ನೀಡಿದ್ದಾರೆ. ಭರತ್ ಮತ್ತು ಸಂಹಿತಾ ವಿನ್ಯಾ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಈ ಸಿನಿಮಾ, ಮೆಜೆಸ್ಟಿಕ್ ಏರಿಯಾದ ಅಕ್ರಮ ಚಟುವಟಿಕೆಗಳು ಮತ್ತು ರೌಡಿಸಂ ಕುರಿತಾಗಿ ಕಥೆ ಹೊಂದಿದೆ.
ಚಿತ್ರದ ನಿರ್ಮಾಪಕ ಹೆಚ್. ಆನಂದಪ್ಪ, ಶೂಟಿಂಗ್ ಯಶಸ್ವಿ ಎಂದೂ, ಡಿಸೆಂಬರ್ 26ಕ್ಕೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. 6 ಫೈಟ್, ರೊಮ್ಯಾನ್ಸ್, ಸೆಂಟಿಮೆಂಟ್ ಸೇರಿದಂತೆ ಬೃಹತ್ ಆಕ್ಷನ್ ಕಥೆ ಹೊಂದಿರುವ ಈ ಚಿತ್ರ ದರ್ಶನ್ ಅಭಿಮಾನಿಗಳ ವಿಶೇಷ ಆಕರ್ಷಣೆಯಾಗಲಿದೆ.