Back to Top

ಬಿಗ್​ಬಾಸ್​​ ಸಾಮ್ರಾಜ್ಯದಲ್ಲಿ ಬಿಗ್ ಟ್ವಿಸ್ಟ್ ಯುವರಾಣಿ vs ಮಹಾರಾಜ

SSTV Profile Logo SStv November 27, 2024
ಯುವರಾಣಿ vs ಮಹಾರಾಜ
ಯುವರಾಣಿ vs ಮಹಾರಾಜ
ಬಿಗ್​ಬಾಸ್​​ ಸಾಮ್ರಾಜ್ಯದಲ್ಲಿ ಬಿಗ್ ಟ್ವಿಸ್ಟ್ ಯುವರಾಣಿ vs ಮಹಾರಾಜ ಬಿಗ್ ಬಾಸ್ ಕನ್ನಡ 11 ಮನೆಯಲ್ಲಿ ಹೊಸ ಡ್ರಾಮಾ ಆರಂಭವಾಗಿದೆ. ಸಾಮ್ರಾಜ್ಯದ ಮಹಾರಾಜ ಮಂಜು ಅವರ ಅಧಿಕಾರವನ್ನು ಯುವರಾಣಿ ಮೋಕ್ಷಿತಾ ಕಸಿದುಕೊಳ್ಳಲು ಮುಂದಾಗಿದ್ದಾರೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಬಿಗ್ ಬಾಸ್ ಹೊಸ ಪ್ರೊಮೋ ಹಂಚಿಕೊಂಡಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಸಾಮ್ರಾಜ್ಯದ ಗದ್ದುಗೆ ಹೊಡೆದಾಟ ಮೋಕ್ಷಿತಾ ನೇರವಾಗಿ ಮಂಜು ಮಹಾರಾಜರ ಕ್ಯಾಪ್ಟನ್ಸಿ ರೂಮ್‌ನಲ್ಲಿ ಕುಳಿತುಬಿಟ್ಟಿದ್ದು, ಇವರಿಬ್ಬರ ನಡುವೆ ಮಾತಿನ ಚಕಮಕಿ ಜೋರಾಗಿದೆ. “ಈ ಖುರ್ಚಿ ನನ್ನದು” ಎಂದು ಮೋಕ್ಷಿತಾ ಘೋಷಿಸಿದರೆ, ಮಂಜು ಅವರ ಅಧಿಕಾರವನ್ನು ಕಾಪಾಡಲು ತೊಡೆ ತಟ್ಟಿದ್ದಾರೆ. ಕ್ಯಾಪ್ಟನ್ ರೂಮ್ ಮೋಕ್ಷಿತಾ ಹಠಾ ಕ್ಯಾಪ್ಟನ್ ರೂಮ್‌ಗೆ ನುಗ್ಗಲು ಪ್ರಯತ್ನಿಸಿದಾಗ, ಮಂಜು ಅವರನ್ನು ತಡೆಯಲು ಬಾಗಿಲು ಮುಚ್ಚಿದ್ದಾರೆ. ಈ ಗದ್ದುಗೆ ಕಿತ್ತಾಟದ ಅಂತಿಮ ಫಲಿತಾಂಶ ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ. ಬಿಗ್ ಬಾಸ್ ಮನೆಯಲ್ಲಿ ಆಟ ಇನ್ನಷ್ಟು ಉತ್ಸಾಹಭರಿತವಾಗಿದ್ದು, ಯಾರು ಗೆಲುತ್ತಾರೋ ಕಾದು ನೋಡೋಣ.