Back to Top

ಜುಲೈ 18ರಂದು 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ 'ಎಕ್ಕ' ರಿಲೀಸ್: ಯುವರಾಜ್ ಕುಮಾರ್ ಮತ್ತೆ ಅಬ್ಬರಿಸಲು ಸಿದ್ಧ!

SSTV Profile Logo SStv July 16, 2025
ಯುವರಾಜ್ ಕುಮಾರ್ ಮತ್ತೆ ಅಬ್ಬರಿಸಲು ಸಿದ್ಧ!
ಯುವರಾಜ್ ಕುಮಾರ್ ಮತ್ತೆ ಅಬ್ಬರಿಸಲು ಸಿದ್ಧ!

'ಯುವ' ನಂತರ ನಟ ಯುವರಾಜ್ ಕುಮಾರ್ ಮತ್ತೊಂದು ಭರ್ಜರಿ ಸಿನಿಮಾದೊಂದಿಗೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. 'ಎಕ್ಕ' ಎಂಬ ಶೀರ್ಷಿಕೆಯಲ್ಲಿ ಮೂಡಿ ಬಂದಿರುವ ಈ ಸಿನಿಮಾ ಜುಲೈ 18ರಂದು ರಾಜ್ಯದಾದ್ಯಂತ 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ.

ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ, ಯುವರಾಜ್ ಮುತ್ತು ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜನಾ ಆನಂದ್, ಸಂಪದಾ, ಮತ್ತು ಶೃತಿ ಸಹ ನಾಯಕಿಯರಾಗಿ ಅಭಿನಯಿಸಿದ್ದಾರೆ.

ಚಿತ್ರದ ಹಾಡುಗಳು ಹಾಗೂ ಟ್ರೈಲರ್‌ ಗೆ already ಭಾರಿ ಸ್ಪಂದನೆ ದೊರೆತಿದ್ದು, ಕಥಾ ಹಂದರವೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚರಣ್ ರಾಜ್‌ ಸಂಗೀತ ಚಿತ್ರಕ್ಕೆ ಬಲ ನೀಡಿದ್ದು, ಸಿನಿಮಾಗೆ U/A ಪ್ರಮಾಣ ಪತ್ರ ಲಭಿಸಿದೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್, ಕಾರ್ತಿಕ್ ಗೌಡ ಮತ್ತು ಜಯಣ್ಣ ನಿರ್ಮಾಪಕರಾಗಿ ಈ ಚಿತ್ರದಲ್ಲಿ ಪಾಲ್ಗೊಂಡಿದ್ದು, ಕೆಜಿ ರಸ್ತೆಯ ಸಂತೋಷ್ ಥಿಯೇಟರ್‌ನಲ್ಲಿ ಪ್ರಮುಖವಾಗಿ ರಿಲೀಸ್ ಆಗಲಿದೆ. ಇದೇ ದಿನ 'ಜೂನಿಯರ್' ಚಿತ್ರವೂ ತೆರೆಗೆ ಬರಲಿದೆ. 'ಎಕ್ಕ' ಚಿತ್ರದ ರಿಲೀಸ್‌ಗಾಗಿ ಕೌಂಟ್‌ಡೌನ್‌ ಈಗಾಗಲೇ ಆರಂಭವಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ನಿರ್ಮಾಣವಾಗಿದೆ.