Back to Top

ಸ್ಯಾಂಡಲ್‌ವುಡ್‌ಗೆ ದುಃಖ: ಯುವ ನಟ ಸಂತೋಷ್ ಬಾಲರಾಜ್ ನಿಧನ

SSTV Profile Logo SStv August 5, 2025
ಯುವ ನಟ ಸಂತೋಷ್ ಬಾಲರಾಜ್ ನಿಧನ
ಯುವ ನಟ ಸಂತೋಷ್ ಬಾಲರಾಜ್ ನಿಧನ

ಸ್ಯಾಂಡಲ್‌ವುಡ್‌ನ ಯುವ ನಟ ಸಂತೋಷ್ ಬಾಲರಾಜ್ (34) ಇಂದು (ಆ.5) ಬೆಳಗ್ಗೆ ನಿಧನರಾಗಿದ್ದಾರೆ. ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಬೆಳಗ್ಗೆ 9.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಹಿರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರರಾದ ಸಂತೋಷ್, ಕಳೆದ ತಿಂಗಳು ಜಾಂಡೀಸ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲಿಗೆ ಗುಣಮುಖರಾಗಿದ್ದರೂ, ಮತ್ತೊಮ್ಮೆ ಅಸ್ವಸ್ಥಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಾಂಡೀಸ್ ಮೈಗೆಲ್ಲ ಹರಡಿ ಗಂಭೀರ ಸ್ಥಿತಿಗೆ ತಲುಪಿದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.

ಕರಿಯಾ-2, ಕೆಂಪ, ಗಣಪ, ಬರ್ಕ್ಲಿ, ಮತ್ತು ಸತ್ಯ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ್ದ ಸಂತೋಷ್ ಬಾಲರಾಜ್, ತನ್ನ ವಿಭಿನ್ನ ಶೈಲಿಯ ಮೂಲಕ ಪ್ರेಕ್ಷಕರ ಮನ ಗೆದ್ದಿದ್ದರು. ಅವರ ಆಕಸ್ಮಿಕ ಮರಣದಿಂದ ಚಿತ್ರರಂಗದಲ್ಲಿ ಆಘಾತದ ವಾತಾವರಣ ಉಂಟಾಗಿದೆ.