Back to Top

ಅರ್ಧ ಶತಕ ಪೂರೈಸಿದ "ಸು ಫ್ರಮ್ ಸೋ": ಪ್ರೇಕ್ಷಕರ ಪ್ರೀತಿಗೆ ರಾಜ್ ಬಿ ಶೆಟ್ಟಿ ಧನ್ಯವಾದ

SSTV Profile Logo SStv September 13, 2025
ಸು ಫ್ರಮ್ ಸೋ 50 ದಿನ ಕಂಪ್ಲೀಟ್
ಸು ಫ್ರಮ್ ಸೋ 50 ದಿನ ಕಂಪ್ಲೀಟ್

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸಂಚಲನ ಮೂಡಿಸಿರುವ ಸಿನಿಮಾ “ಸು ಫ್ರಮ್ ಸೋ”. ಜುಲೈ 25 ರಂದು ಬಿಡುಗಡೆಯಾದ ಈ ಸಿನಿಮಾ ಸೆಪ್ಟೆಂಬರ್ 12ಕ್ಕೆ ಅರ್ಧ ಶತಕ (50 ದಿನ) ಪೂರೈಸಿ, ಇನ್ನೂ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ. ಈ ಖುಷಿಯನ್ನು ಚಿತ್ರದ ನಟ-ನಿರ್ಮಾಪಕ ರಾಜ್ ಬಿ ಶೆಟ್ಟಿ ವಿಶೇಷವಾಗಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟರ್ ಶೇರ್ ಮಾಡುತ್ತಾ, “ನಮ್ಮ ಸಿನಿಮಾ ಅರ್ಧ ಶತಕ ಬಾರಿಸಿದೆ. ಇದು ನನ್ನ ಜೀವನ ಪೂರ್ತಿ ಹೃದಯದಲ್ಲೇ ಉಳಿಯುತ್ತದೆ. ಪ್ರೀತಿಯಿಂದ, ಹಾರೈಸಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು” ಎಂದು ಭಾವುಕವಾಗಿ ಹೇಳಿದ್ದಾರೆ.

3 ಭಾಷೆಗಳಲ್ಲಿ ಬಿಡುಗಡೆಯಾದ ಸಿನಿಮಾ:

  • ಜುಲೈ 25 → ಕನ್ನಡದಲ್ಲಿ ರಿಲೀಸ್
  • ಆಗಸ್ಟ್ 1 → ಮಲಯಾಳಂ ಆವೃತ್ತಿ
  • ಆಗಸ್ಟ್ 8 → ತೆಲುಗು ಆವೃತ್ತಿ

ಈ ಮೂರೂ ಆವೃತ್ತಿಗಳೂ ಪ್ರೇಕ್ಷಕರಿಂದ ಉತ್ತಮ ಸ್ವಾಗತ ಪಡೆದಿವೆ. ಕೇವಲ 6 ಕೋಟಿ ಬಜೆಟ್ ನಲ್ಲಿ ತಯಾರಾದ ಈ ಸಿನಿಮಾ, ಈಗಾಗಲೇ 100 ಕೋಟಿ ಕಲೆಕ್ಷನ್ ದಾಟಿದೆ. ಮೊದಲ ದಿನ: 95 ಲಕ್ಷ, ಮೊದಲ 3 ದಿನ: 6 ಕೋಟಿ, ನಂತರದ ವಾರಗಳಲ್ಲಿ ನಿರಂತರ ಬೆಂಬಲದಿಂದ → 100 ಕೋಟಿ ಕ್ಲಬ್‌ಗೆ ಸೇರ್ಪಡೆ. ಇದಕ್ಕೆ ಸೇರ್ಪಡೆಯಾಗಿ ಚಿತ್ರದ OTT ಹಕ್ಕುಗಳು 6 ಕೋಟಿಗೆ ಮಾರಾಟವಾಗಿವೆ. ಸೆಪ್ಟೆಂಬರ್ 9ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಕೂಡ ಪ್ರಾರಂಭವಾಗಿದೆ.

ಸಿನಿಮಾ ಈಷ್ಟೊಂದು ಯಶಸ್ಸು ಗಳಿಸಿದರೂ, ತಂಡ ಸು ಫ್ರಮ್ ಸೋ-2 ಮಾಡುವ ಯೋಜನೆ ಇಲ್ಲ ಎಂದು ರಾಜ್ ಬಿ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಮುಂದಿನ ಚಿತ್ರ ಸಂಪೂರ್ಣ ಹೊಸ ಕಥೆಯೊಂದಿಗೆ ಬರಲಿದೆ ಎಂದಿದ್ದಾರೆ.

"ಸು ಫ್ರಮ್ ಸೋ" 50 ದಿನ ಪೂರೈಸಿರುವುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಮಾತ್ರವಲ್ಲ, ಇಡೀ ತಂಡಕ್ಕೂ ದೊಡ್ಡ ಉತ್ಸವ. ಕಡಿಮೆ ಬಜೆಟ್‌ನಲ್ಲಿಯೇ ಇಷ್ಟೊಂದು ಭರ್ಜರಿ ಯಶಸ್ಸು ಸಾಧಿಸಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿದೆ.