Back to Top

ಯಶ್-ರಾಧಿಕಾ ಪಂಡಿತ್ ದಾಂಪತ್ಯಕ್ಕೆ 8 ವರ್ಷ ರಾಕಿಂಗ್ ಜೋಡಿಯ ಮೆಮೋರೇಬಲ್ ಪಯಣ

SSTV Profile Logo SStv December 9, 2024
ಯಶ್-ರಾಧಿಕಾ ಪಂಡಿತ್ ದಾಂಪತ್ಯಕ್ಕೆ 8 ವರ್ಷ
ಯಶ್-ರಾಧಿಕಾ ಪಂಡಿತ್ ದಾಂಪತ್ಯಕ್ಕೆ 8 ವರ್ಷ
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪ್ರೀತಿಯ ಕಥೆ, ದಾಂಪತ್ಯ ಜೀವನ ಎಲ್ಲವೂ ವಿಶೇಷವಾಗಿದೆ. ಸೀರಿಯಲ್‌ ಕಾಲದಿಂದಲೇ ಪರಿಚಯ ಹೊಂದಿದ ಈ ಜೋಡಿ, ಐದು ವರ್ಷಗಳ ಪ್ರೀತಿಯ ನಂತರ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗೋವಾದಲ್ಲಿ ನಿಶ್ಚಿತಾರ್ಥ ಆಗಸ್ಟ್ 12, 2016 ರಂದು ರಾಧಿಕಾ ಪಂಡಿತ್‌ ಆಸೆಯಂತೆ ಗೋವಾದಲ್ಲಿ ಎಂಗೇಜ್‌ಮೆಂಟ್​ ನಡೆದಿತ್ತು. ಬೆಂಗಳೂರು ಮದುವೆ ಸಂಭ್ರಮ ಡಿಸೆಂಬರ್ 9, 2016 ರಂದು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಸುಂದರ ಮಂಟಪದಲ್ಲಿ ವಿವಾಹ ನೆರವೇರಿತು. ಕಲಾ ನಿರ್ದೇಶಕ ಅರುಣ್ ಸಾಗರ್‌ ಅವರ ಅದ್ಭುತ ಸೆಟ್‌ಗಳು ಮದುವೆಯ ಸುಂದರತೆಯನ್ನು ಹೆಚ್ಚಿಸಿತು. ಪ್ಯಾಲೆಸ್ ಗ್ರೌಂಡ್‌ನಲ್ಲಿ ಅಭಿಮಾನಿಗಳ ಜೊತೆ ಮದುವೆಯ ನಂತರ ಪ್ಯಾಲೆಸ್ ಗ್ರೌಂಡ್‌ನಲ್ಲಿ ಯಶ್-ರಾಧಿಕಾ ತಮ್ಮ ಅಭಿಮಾನಿಗಳೊಂದಿಗೆ ವಿಶೇಷ ಕ್ಷಣಗಳನ್ನು ಹಂಚಿಕೊಂಡರು. ಈ 8 ವರ್ಷಗಳಲ್ಲಿ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ, ಕೆಜಿಎಫ್‌ನ ಮೂಲಕ ವಿಶ್ವಾದ್ಯಂತ ಮೆರೆದಿದ್ದಾರೆ. ಇದೀಗ 'ಟಾಕ್ಸಿಕ್' ಸಿನಿಮಾದೊಂದಿಗೆ ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟಕ್ಕೆ ತರುವ ಯತ್ನದಲ್ಲಿದ್ದಾರೆ. ಅಭಿಮಾನಿಗಳು ಈ ರಾಕಿಂಗ್ ಜೋಡಿಗೆ ಶಾಶ್ವತ ಸಂತೋಷದ ಆಶೀರ್ವಾದವನ್ನು ಕೋರಿದ್ದಾರೆ.