Back to Top

ಯಶ್ ನಟನೆಯ ‘ರಾಮಾಯಣ’ ಗ್ಲಿಂಪ್ಸ್ ಔಟ್: ನೆಟ್ಟಿಗರಿಂದ ಭರ್ಜರಿ ಫಿದಾ!

SSTV Profile Logo SStv July 3, 2025
ಯಶ್ ನಟನೆಯ ‘ರಾಮಾಯಣ’ ಗ್ಲಿಂಪ್ಸ್ ಔಟ್
ಯಶ್ ನಟನೆಯ ‘ರಾಮಾಯಣ’ ಗ್ಲಿಂಪ್ಸ್ ಔಟ್

ಬಹುನಿರೀಕ್ಷಿತ ರಾಮಾಯಣ (Ramayana Part 1) ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಉಂಟುಮಾಡಿದೆ. ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿರುವ ಈ ಮಹತ್ವಾಕಾಂಕ್ಷಿ ಚಿತ್ರವು 2026 ರ ದೀಪಾವಳಿಗೆ ಬಿಡುಗಡೆಯಾಗಲಿದೆ.

ಮೊದಲ ಬಾರಿಗೆ 3 ನಿಮಿಷಗಳ ಪ್ರೋಮೋವಿಗೆ ನೆಟಿಜನ್‌ಗಳು ಭರ್ಜರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಾಮನ ಪಾತ್ರದಲ್ಲಿ ರಣಬೀರ್ ಅವರ ಫಿಟ್ನೆಸ್ ಮತ್ತು ಶಾಂತ ಭಾವನೆ ಮೆಚ್ಚುಗೆಗೆ ಪಾತ್ರವಾಗಿದ್ದು, ಅದಿಪುರುಷ ಚಿತ್ರದ ಪ್ರಭಾಸ್ ಅವರೊಂದಿಗೆ ಹೋಲಿಕೆ ನಡೆಯುತ್ತಿದೆ. ಪ್ರಬಲ VFX, ಶ್ರದ್ಧೆಯ ವೇಷಭೂಷಣ ಹಾಗೂ ಕಲಾತ್ಮಕ ದೃಶ್ಯ ಸಂಕಲನ ಎಲ್ಲರಿಗೂ ಮೋಡಿ ಮಾಡುತ್ತಿದೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ “ಇದು ಹತ್ತು ವರ್ಷಗಳ ಕನಸು” ಎಂದು ಹೇಳಿದ್ದು, ಈ ಚಿತ್ರ ಭಾರತದ ಸಂಸ್ಕೃತಿಯನ್ನು ವಿಶ್ವದ ಮುಂದೆ ಗೌರವದಿಂದ ತೋರಿಸಲು ಸಿದ್ಧವಾಗಿದೆ. ನೆಟ್ಟಿಗರು “ಇದು ಭಾರತೀಯ ಸಿನಿಮಾದ ಪರಿಕಲ್ಪನೆಯೇ ಬದಲಾಯಿಸುತ್ತೆ!” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ರಿಲೀಸ್‍ಗೆ ಇನ್ನೂ ಸಮಯ ಇದ್ದರೂ, ‘ರಾಮಾಯಣ’ ಈಗಾಗಲೇ ಭಕ್ತರ ಹೃದಯ ಗೆದ್ದಿದೆ!