Back to Top

'ಟಾಕ್ಸಿಕ್' ಸಿನಿಮಾದಲ್ಲಿ ಯಶ್ ಜೊತೆಗೆ ಅನಿಲ್ ಕಪೂರ್

SSTV Profile Logo SStv December 9, 2024
ಯಶ್ ಜೊತೆಗೆ ಅನಿಲ್ ಕಪೂರ್
ಯಶ್ ಜೊತೆಗೆ ಅನಿಲ್ ಕಪೂರ್
'ಟಾಕ್ಸಿಕ್' ಸಿನಿಮಾದಲ್ಲಿ ಯಶ್ ಜೊತೆಗೆ ಅನಿಲ್ ಕಪೂರ್ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಬಹು ನಿರೀಕ್ಷಿತ ಸಿನಿಮಾ 'ಟಾಕ್ಸಿಕ್' ಕುರಿತು ಹೊಸ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್ ನಟ ಅನಿಲ್ ಕಪೂರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಾಸಿಯಾಗಿದೆ. ಮುಂಬೈನಲ್ಲಿ ಶೂಟಿಂಗ್ ವೇಳೆ, ಅನಿಲ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಬೋಟ್‌ನಲ್ಲಿ ಭೇಟಿಯಾದ ದೃಶ್ಯಗಳು ಅಭಿಮಾನಿಗಳ ಊಹೆಗಳಿಗೆ ಕಾರಣವಾಗಿದೆ. ಈ ಸುದ್ದಿಯು ಸತ್ಯವಾಗಿದೆಯಾದರೆ, 1983ರಲ್ಲಿ ಮಣಿರತ್ನಂ ನಿರ್ದೇಶನದ 'ಪಲ್ಲವಿ ಅನುಪಲ್ಲವಿ' ನಂತರ ಅನಿಲ್ ಕಪೂರ್ 41 ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿದಂತಾಗುತ್ತದೆ. 'ಟಾಕ್ಸಿಕ್' ಸಿನಿಮಾದಲ್ಲಿ ಯಶ್ ಜೊತೆ ಕಿಯಾರಾ ಅಡ್ವಾಣಿ, ನಯನತಾರಾ, ಮತ್ತು ಹುಮಾ ಖುರೇಶಿ ಸೇರಿ ಬೃಹತ್ ತಾರಾಗಣವಿದ್ದು, ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಆದರೆ, ಚಿತ್ರತಂಡದಿಂದ ಅಧಿಕೃತ ಘೋಷಣೆಯಿಲ್ಲದ ಕಾರಣ, ಅಭಿಮಾನಿಗಳು ಕಾದುನೋಡುತ್ತಿದ್ದಾರೆ.