Back to Top

ವಿಶ್ವ ಕನ್ನಡ ಹಬ್ಬ’ಕ್ಕೆ ಹಾರೈಸಿದ ಶಿವರಾಜ್ ಕುಮಾರ್

SSTV Profile Logo SStv November 21, 2024
ವಿಶ್ವ ಕನ್ನಡ ಹಬ್ಬ’ಕ್ಕೆ ಹಾರೈಸಿದ ಶಿವರಾಜ್ ಕುಮಾರ್
ವಿಶ್ವ ಕನ್ನಡ ಹಬ್ಬ’ಕ್ಕೆ ಹಾರೈಸಿದ ಶಿವರಾಜ್ ಕುಮಾರ್
ವಿಶ್ವ ಕನ್ನಡ ಹಬ್ಬ’ಕ್ಕೆ ಹಾರೈಸಿದ ಶಿವರಾಜ್ ಕುಮಾರ್ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಾಗೂ ಅಲ್ಲಿನ ಕನ್ನಡ ಸಂಘಗಳ ಸಹಯೋಗದಲ್ಲಿ 2ನೇ ವಿಶ್ವ ಕನ್ನಡ ಹಬ್ಬವನ್ನು ಸಿಂಗಪುರದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಯಿತು. ಅನಾರೋಗ್ಯದ ಕಾರಣದಿಂದ ಸಮಾರಂಭಕ್ಕೆ ಹಾಜರಾಗಲಾರದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ವಿಡಿಯೋ ಸಂದೇಶದ ಮೂಲಕ ಕನ್ನಡಿಗರಿಗೆ ಶುಭ ಹಾರೈಸಿದರು. ಈ ಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಪದ ಗಾಯನ, ನಾಟಕ, ಪ್ರಶಸ್ತಿ ವಿತರಣೆ, ಮತ್ತು ಗೌರವ ಸಮರ್ಪಣೆ ಸೇರಿ ಹಲವಾರು ವೈವಿಧ್ಯಮಯ ಚಟುವಟಿಕೆಗಳು ನಡೆದವು. ಇಸ್ರೋ ವಿಜ್ಞಾನಿ ಎಸ್. ಕಿರಣ್ ಕುಮಾರ್ ಅವರಿಗೆ ವಿಶ್ವಮಾನವ ಪ್ರಶಸ್ತಿ, ಹಾಗೂ ಮೀನಾರಾಜ್ ಅವರಿಗೆ ವಿಶ್ವಕನ್ನಡತಿ ಕಿರೀಟ ಪ್ರದಾನ ಮಾಡಲಾಯಿತು. ವಿಶೇಷವಾಗಿ ಸಿದ್ದಿ ಜನಾಂಗದ 10 ಪ್ರತಿಭೆಗಳಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಯಿತು. ಗಾಯಕಿ ಮಂಗ್ಲಿ ಅವರ ಗಾಯನ, ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯ ಅವರ ಪ್ರಸ್ತುತಿಗಳು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದು, 120ಕ್ಕೂ ಹೆಚ್ಚು ಕನ್ನಡಿಗರು ಭಾರತದಿಂದ ಸಿಂಗಪುರಕ್ಕೆ ಭೇಟಿ ನೀಡಿದರು. ಈ ಹಬ್ಬವು ವಿದೇಶಗಳಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಲು, ಬೆಳಸಲು ಹಾಗೂ ಸಾಧನೆಗೈದ ಕನ್ನಡಿಗರಿಗೆ ಗೌರವ ಸಲ್ಲಿಸುವ ಮಹತ್ವದ ಪ್ರಯತ್ನವಾಗಿದೆ.