ವಿನಯ್ ರಾಜ್‌ಕುಮಾರ್ ಜೊತೆ ರಮ್ಯಾ ಫೋಟೋಶೂಟ್ – ತೆರೆ ಮೇಲಿನ ಜೋಡಿ ಆಗ್ತಾರಾ?


ಇತ್ತೀಚೆಗೆ ನಟಿ ರಮ್ಯಾ ಮತ್ತು ಯುವ ನಟ ವಿನಯ್ ರಾಜ್‌ಕುಮಾರ್ ಜತೆಯಾಗಿ ಮಾಡಿದ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇವರು ಸಿನಿಮಾನಲ್ಲಿ ಜತೆಯಾಗಿದ್ದಾರಾ ಎಂಬ ಅನುಮಾನ ಪಟಕೊಂಡರೂ, ಈ ಫೋಟೋಶೂಟ್ ನಿಜವಾದ ಉದ್ದೇಶ ಮಾತ್ರ ವಿಭಿನ್ನ. ಇವರು ‘ಸ್ವಾಸ ಲೈಫ್’ ಎಂಬ ಮ್ಯಾಗಜಿನ್‌ಗಾಗಿ ಈ ಫೋಟೋಶೂಟ್ ಮಾಡಿಸಿದ್ದಾರೆ.
ರಮ್ಯಾ ಅವರು ಹಿರಿತೆರೆಗೆ ಮತ್ತೆ ಬರುತ್ತಾರಾ ಎಂಬ ಪ್ರಶ್ನೆಗೆ ಅಭಿಮಾನಿಗಳು ಉತ್ತರಕ್ಕಾಗಿ ಕಾಯುತ್ತಿದ್ದಾರೆ. ಹಲವು ವರ್ಷಗಳಿಂದ ಅವರು ನಾಯಕಿಯಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ, ಇತ್ತೀಚಿನ ಫೋಟೋಶೂಟ್ ಮೂಲಕ ತಮ್ಮ ಸೌಂದರ್ಯದಿಂದಲೇ ಮತ್ತೆ ಸುದ್ದಿ ಪಡೆದಿದ್ದಾರೆ. ವಿನಯ್ ಕೂಡ ತಮ್ಮ ಡ್ಯಾಶಿಂಗ್ ಲುಕ್‌ನಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.
ಈ ಜೋಡಿ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳಲಿ ಎಂಬ ಅಭಿಮಾನಿಗಳ ಬಯಕೆ ಹೆಚ್ಚಾಗಿದ್ದರೂ, ಪ್ರಸ್ತುತ ಇವರ ಈ ಫೋಟೋಶೂಟ್ ಕೇವಲ ಮ್ಯಾಗಜಿನ್‌ಗಾಗಿ ಎಂಬುದೇ ಸತ್ಯ. ಆದರೂ, ಮುಂದಿನ ದಿನಗಳಲ್ಲಿ ಇವರಿಬ್ಬರೂ ಸಿನಿಮಾ ಮೂಲಕ ಒಟ್ಟಿಗೆ ಬರುತ್ತಾರೋ ಎಂಬ ನಿರೀಕ್ಷೆ ಫ್ಯಾನ್ಸ್ಗೆಉಳಿದಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
