Back to Top

ವಿಜಯ್ ದೇವರಕೊಂಡ ಕುಟುಂಬಕ್ಕೆ ‘ಪುಷ್ಪ 2’ ತೋರಿಸಿದ ರಶ್ಮಿಕಾ ಮಂದಣ್ಣ

SSTV Profile Logo SStv December 6, 2024
ವಿಜಯ್ ದೇವರಕೊಂಡ ಕುಟುಂಬಕ್ಕೆ ‘ಪುಷ್ಪ 2’ ತೋರಿಸಿದ ರಶ್ಮಿಕಾ
ವಿಜಯ್ ದೇವರಕೊಂಡ ಕುಟುಂಬಕ್ಕೆ ‘ಪುಷ್ಪ 2’ ತೋರಿಸಿದ ರಶ್ಮಿಕಾ
ವಿಜಯ್ ದೇವರಕೊಂಡ ಕುಟುಂಬಕ್ಕೆ ‘ಪುಷ್ಪ 2’ ತೋರಿಸಿದ ರಶ್ಮಿಕಾ ಮಂದಣ್ಣ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತೆ ವಿಜಯ್ ದೇವರಕೊಂಡ ಜೊತೆಗಿನ ಸಂಬಂಧದ ವದಂತಿಗಳನ್ನು ಚರ್ಚೆಗೆ ತಂದುಕೊಟ್ಟಿದ್ದಾರೆ. ಡಿ.5ರಂದು ಹೈದರಾಬಾದ್‌ನ ಎಎಂಬಿ ಸಿನಿಮಾಸ್‌ನಲ್ಲಿ ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ಮತ್ತು ಸಹೋದರ ಆನಂದ್ ದೇವರಕೊಂಡ ಅವರ ಜೊತೆ ರಶ್ಮಿಕಾ ‘ಪುಷ್ಪ 2’ ಚಿತ್ರವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ರಶ್ಮಿಕಾ ‘ರೌಡಿ’ ಬ್ರಾಂಡ್ ಟೀ-ಶರ್ಟ್ ಧರಿಸಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ಇದಕ್ಕೂ ಮುನ್ನ ರಶ್ಮಿಕಾ ‘ಪುಷ್ಪ 2’ ಪ್ರೀ-ರಿಲೀಸ್​ ಕಾರ್ಯಕ್ರಮದಲ್ಲಿ ತಮ್ಮ ಮದುವೆಯ ಬಗ್ಗೆ ಸುಳಿವು ನೀಡಿದ್ದು, ವಿಜಯ್ ಕೂಡ ತಮ್ಮ ರಿಲೇಷನ್‌ಶಿಪ್ ಕುರಿತು ಬಾಯಿ ಬಿಟ್ಟಿದ್ದರು. ಈ ಎಲ್ಲ ಇಂಗಿತಗಳು ಇಬ್ಬರ ನಡುವಿನ ಸಂಬಂಧಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದಂತೆ ಕಾಣಿಸುತ್ತಿದೆ. ‘ಪುಷ್ಪ 2’ ಸಿನಿಮಾ ಡಿ.5ರಂದು ರಿಲೀಸ್​ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಅಲ್ಲು ಅರ್ಜುನ್​​-ರಶ್ಮಿಕಾ ಜೋಡಿಯೊಂದಿಗೆ ಶ್ರೀಲೀಲಾ, ಫಹಾದ್ ಫಾಸಿಲ್​​, ಜಗಪತಿ ಬಾಬು ಸೇರಿದಂತೆ ಅನೇಕರು ಮಹತ್ವದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ-ವಿಜಯ್​ ಅವರ ಸಂಬಂಧಕ್ಕೆ ಸಂಬಂಧಿಸಿದಂತೆ ಫ್ಯಾನ್ಸ್ ಈಗ ಮದುವೆ ಘೋಷಣೆಗೆ ಕಾಯುತ್ತಿದ್ದಾರೆ.