Back to Top

ವಿಜಯ್ ದೇವರಕೊಂಡ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲು – ಅಭಿಮಾನಿಗಳಲ್ಲಿ ಆತಂಕ

SSTV Profile Logo SStv July 18, 2025
ವಿಜಯ್ ದೇವರಕೊಂಡ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲು
ವಿಜಯ್ ದೇವರಕೊಂಡ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲು

ಟಾಲಿವುಡ್‌ನ ಸ್ಟಾರ್ ನಟ ವಿಜಯ್ ದೇವರಕೊಂಡ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಅಭಿಮಾನಿಗಳನ್ನು ಚಿಂತೆಯಲ್ಲಿಟ್ಟಿದೆ.

'ಕಿಂಗ್‌ಡಮ್' ಚಿತ್ರದಲ್ಲಿ ನಟಿಸಿ, ಜುಲೈ 31ರಂದು ತೆರೆಗೆ ಬರಲಿರುವ ವಿಜಯ್, ಈ ನಡುವೆ ಆರೋಗ್ಯದ ಸಮಸ್ಯೆಗೆ ಒಳಗಾಗಿದ್ದಾರೆ. ಗೌತಮ್ ತಿನ್ನನುರಿ ನಿರ್ದೇಶನದ ಈ ಚಿತ್ರದಲ್ಲಿ ಭಾಗ್ಯಶ್ರೀ ಭೋರ್ಸ್ ನಾಯಕಿಯಾಗಿ ನಟಿಸುತ್ತಿದ್ದು, ಸತ್ಯದೇವ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯ್ ದೇವರಕೊಂಡ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜುಲೈ 20 ನಂತರ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅವರ ಕುಟುಂಬದಿಂದ ಆರೋಗ್ಯದ ಬಗ್ಗೆ ಅಧಿಕೃತ ಪ್ರಕಟಣೆ ಬಂದಿಲ್ಲದಿದ್ದರೂ, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ “ಬೇಗ ಚೇತರಿಸಿಕೊಳ್ಳಲಿ” ಎಂಬ ಶುಭಾಶಯಗಳನ್ನು ಹರಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಶೀಘ್ರ ಗುಣಮುಖರಾಗಲೆಂದು ಕನ್ನಡ ಸಿನಿಪ್ರಿಯರೂ ಹಾರೈಸುತ್ತಿದ್ದಾರೆ.