ಶಿವರಾಜ್ ಕುಮಾರ್ ಹುಟ್ಟುಹಬ್ಬದ ಮುನ್ನವೇ ‘ಉತ್ತರಕಾಂಡ’ ಚಿತ್ರದ ಬಿಗ್ ಅಪ್‌ಡೇಟ್ – ಶಿವಣ್ಣನ ಹೊಸ ಲುಕ್ ರಿವೀಲ್!


ಸ್ಯಾಂಡಲ್‌ವುಡ್‌ನಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲೊಂದು ‘ಉತ್ತರಕಾಂಡ’, ಈಗ ಮತ್ತೆ ಸುದ್ದಿಗೆ ಬಂದಿದೆ. ನಟ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರ ಪುನಾರಂಭವಾಗುತ್ತಿರುವಂತೆಯೇ, ಅವರ ಜನ್ಮದಿನದ ಒಂದು ದಿನ ಮುಂಚಿತವಾಗಿ, ಸಿನಿಮಾ ತಂಡವು ಶಿವಣ್ಣನ ವಿಭಿನ್ನ ಲುಕ್ ಅನ್ನು ಬಹಿರಂಗಪಡಿಸಿದೆ. ನಿರ್ಮಾಪಕ ಕಾರ್ತಿಕ್ ಗೌಡ ಸ್ವತಃ ಈ ಮಾಹಿತಿ ಶೇರ್ ಮಾಡಿದ್ದು, ಅಭಿಮಾನಿಗಳಲ್ಲಿ ಹೊಸ ಕುತೂಹಲವನ್ನು ಹುಟ್ಟಿಸಿದೆ.
'ಉತ್ತರಕಾಂಡ' ಚಿತ್ರದಲ್ಲಿ ಶಿವಣ್ಣ ‘ಮಾಲೀಕ’ ಎನ್ನುವ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮಾಲೀಕನ ಹೊಸ ಲುಕ್ ಈಗ ರಿವೀಲ್ ಆಗಿದ್ದು, ಬಿಳಿ ಜುಬ್ಬಾ, ಬಂಗಾರದ ಚೈನ್, ಸ್ಟೈಲಿಷ್ ಗಾಗಲ್ಸ್ ಹಾಗೂ ಬಾಯಲ್ಲಿ ಸಿಗಾರ್‌ವಿರುವ ಇಮೇಜ್ ಅಭಿಮಾನಿಗಳಿಗೆ ಹೆಜ್ಜೆ ಮುಂದುವರೆಸಿದೆ. ಈ ಲುಕ್ ಮೂಲಕ ಪಾತ್ರದ ಪ್ರಭಾವವನ್ನೇ ಸೂಚಿಸುತ್ತಿದೆ. ‘ಉತ್ತರಕಾಂಡ’ ಸಿನಿಮಾ ಕೆಲಕಾಲದಿಂದ ಶೂಟಿಂಗ್ ನಿಲ್ಲಿಸಿದ್ದ ಕಾರಣ, ಇದು ಡ್ರಾಪ್ ಆಗಿದೆಯೋ ಎಂಬ ಊಹಾಪೋಹಗಳು ಹರಡಿದ್ದವು. ಆದರೆ, ‘ಎಕ್ಕ’ ಚಿತ್ರದ ಪ್ರೆಸ್ ಮೀಟ್‌ನಲ್ಲಿ ಡೈರೆಕ್ಟರ್ ರೋಹಿತ್ ಪದಕಿ ಸ್ಪಷ್ಟನೆ ನೀಡಿ, “‘ಉತ್ತರಕಾಂಡ’ ನಿಂತಿಲ್ಲ, ಕೆಲಕಾಲ Pause ಆಗಿತ್ತು ಅಷ್ಟೆ” ಎಂದು ಹೇಳಿದ್ದಾರೆ. ಈಗ ನಿರ್ಮಾಪಕ ಕಾರ್ತಿಕ್ ಗೌಡ ಅಧಿಕೃತವಾಗಿ ಶೂಟಿಂಗ್ ಮತ್ತೆ ಪ್ರಾರಂಭವಾಗುತ್ತಿದ್ದು, ಸದ್ಯದಲ್ಲೇ ಕೆಲಸ ಪುನರಾರಂಭವಾಗಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಚಿತ್ರದ ಕೆಲವು ಭಾಗಗಳ ಶೂಟಿಂಗ್ ಬೆಳಗಾವಿ, ವಿಜಯಪುರ, ಹಾಗು ಹುಬ್ಬಳ್ಳಿನಲ್ಲಿ ಮುಗಿದಿವೆ. ಚಿತ್ರದಲ್ಲಿ ಯೋಗರಾಜ್ ಭಟ್, ದಿಗಂತ್, ಚೈತ್ರಾ ಆಚಾರ್ ಸೇರಿ ಹಲವು ಪ್ರತಿಭಾನ್ವಿತ ನಟರು ಭಾಗವಹಿಸುತ್ತಿದ್ದಾರೆ. ‘ಉತ್ತರಕಾಂಡ’ ಸ್ಯಾಂಡಲ್‌ವುಡ್ ಚಿತ್ರರಸಿಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಶಿವರಾಜ್ ಕುಮಾರ್ ಅವರ ಮಾಲೀಕ ಪಾತ್ರ, ಶಕ್ತಿಶಾಲಿ ನಿರೂಪಣೆ, ಹಾಗೂ ವಿಭಿನ್ನ ಸ್ಕ್ರೀನ್ ಪ್ರೆಸೆನ್ಸ್ ಚಿತ್ರದ ಸ್ಪೆಷಾಲಿಟಿಯಾಗಲಿದೆ. ಈಗ ಶೂಟಿಂಗ್ ಮತ್ತೆ ಆರಂಭವಾಗುತ್ತಿದ್ದು, ಅಭಿಮಾನಿಗಳ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ. ಜುಲೈ 12ರಂದು ಶಿವಣ್ಣ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇದು ಅಭಿಮಾನಿಗಳಿಗೆ ಒಂದು ಬೆಸ್ಟ್ ಗಿಫ್ಟ್ ಎಂದೇ ಹೇಳಬಹುದು.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
