Back to Top

ಹುಷಾರಾಗಿ ವಾಪಸ್ ಬರ್ತೀನಿ ಅಮೆರಿಕಾಗೆ ತೆರಳುವಾಗ ಶಿವಣ್ಣ ಕಣ್ಣೀರು ಅಭಿಮಾನಿಗಳಿಗೆ ಹೇಳಿದ್ದೇನು

SSTV Profile Logo SStv December 18, 2024
ಹುಷಾರಾಗಿ ವಾಪಸ್ ಬರ್ತೀನಿ ಶಿವಣ್ಣ
ಹುಷಾರಾಗಿ ವಾಪಸ್ ಬರ್ತೀನಿ ಶಿವಣ್ಣ
ಹುಷಾರಾಗಿ ವಾಪಸ್ ಬರ್ತೀನಿ ಅಮೆರಿಕಾಗೆ ತೆರಳುವಾಗ ಶಿವಣ್ಣ ಕಣ್ಣೀರು ಅಭಿಮಾನಿಗಳಿಗೆ ಹೇಳಿದ್ದೇನು ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಪತ್ನಿ ಗೀತಾ ಮತ್ತು ಪುತ್ರಿ ನಿವೇದಿತಾ ಅವರೊಂದಿಗೆ ಪ್ರಯಾಣ ಬೆಳೆಸುವ ಮುನ್ನ, ಶಿವಣ್ಣ ಭಾವುಕರಾಗಿ ಅಭಿಮಾನಿಗಳಿಗೆ ಧೈರ್ಯದ ಮಾತು ಹೇಳಿದರು. “ನಾನು ಹೂಷಾರಾಗಿ ವಾಪಸ್ ಬರ್ತೀನಿ. 24ರಂದು ಶಸ್ತ್ರಚಿಕಿತ್ಸೆ ಆಗಲಿದೆ. ಎಲ್ಲ ರಿಪೋರ್ಟ್‌ಗಳು ಪಾಸಿಟಿವ್ ಆಗಿವೆ. ಯಾರೂ ಆತಂಕ ಪಡಬೇಡಿ,” ಎಂದ ಶಿವಣ್ಣ, ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯತೆ ಅರ್ಪಿಸಿದರು. ಅವರ ಸುದೀಪ್ ನಟನೆಯ ಮ್ಯಾಕ್ಸ್, ಹೊಸ ವರ್ಷ ಮತ್ತು ಇಯರ್ ಎಂಡ್‌ನಲ್ಲಿ ರಿಲೀಸ್ ಆಗುವ ಎಲ್ಲಾ ಚಿತ್ರಗಳಿಗೆ ಶುಭ ಹಾರೈಸಿದ ಶಿವಣ್ಣ, ಜನವರಿ 1ರ ನಂತರ ವಾಪಸ್ಸು ಬರಲಿದ್ದಾರೆ ಎಂದು ಭರವಸೆ ನೀಡಿದರು. ಅಭಿಮಾನಿಗಳ ಪ್ರೀತಿಗೆ ಸದಾ ಚಿರರುಣಿ ಎಂಬ ಮಾತುಗಳ ಮೂಲಕ ಅವರು ಮನಸ್ಸಿಗೆ ತಟ್ಟುವಷ್ಟು ಭಾವುಕರಾದರು.