ಉಪೇಂದ್ರಗೆ ಉಪೇಂದ್ರನೇ ಪೈಪೊಟಿ: ಆಗಸ್ಟ್ 15ರಂದು ಒಂದೇ ದಿನ ಎರಡು ಸಿನಿಮಾಗಳು ರಿಲೀಸ್!
SStv
July 17, 2025
ಉಪೇಂದ್ರ ಅಭಿಮಾನಿಗಳಿಗೆ ಡಬಲ್ ಧಮಾಕಾ! ಸ್ಟಾರ್ ನಟ ಉಪೇಂದ್ರ ಅಭಿನಯದ ಎರಡು ಬಹುತಾರಾಗಣದ ದೊಡ್ಡ ಬಜೆಟ್ ಚಿತ್ರಗಳು ಆಗಸ್ಟ್ 15 ರಂದು ಒಂದೇ ದಿನ ರಿಲೀಸ್ ಆಗಲಿವೆ. ಈ ಮೂಲಕ ಉಪೇಂದ್ರಗೆ ಉಪೇಂದ್ರನೇ ಸ್ಪರ್ಧೆಯಾಗಿದ್ದಾರೆ.
ಮೊದಲ ಚಿತ್ರ ‘45’, ಅರ್ಜುನ್ ಜನ್ಯ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದು, ಉಪೇಂದ್ರ ಜೊತೆ ಶಿವರಾಜ್ ಕುಮಾರ್ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡನೇ ಚಿತ್ರ ‘ಕೂಲಿ’, ತಮಿಳು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಜನೀಕಾಂತ್, ನಾಗಾರ್ಜುನ, ಮತ್ತು ಆಮಿರ್ ಖಾನ್ ಕೂಡ ನಟಿಸಿದ್ದಾರೆ.
ಎರಡೂ ಸಿನಿಮಾಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಬಹು ನಿರೀಕ್ಷೆಯಲ್ಲಿರುವ ಈ ಚಿತ್ರಗಳ ಪ್ರಚಾರ ಕಾರ್ಯಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. ಉಪೇಂದ್ರ ಅಭಿಮಾನಿಗಳು ಈ ಬಾರಿಯ ಆಗಸ್ಟ್ 15ರ ಲಾಂಗ್ ವೀಕೆಂಡ್‌ನಲ್ಲಿ ಎರಡು ಭಿನ್ನ ಶೈಲಿಯ ಸಿನಿಮಾಗಳನ್ನು ಎಂಜಾಯ್ ಮಾಡಲು ಸಿದ್ಧರಾಗಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
