ಉಪೇಂದ್ರ vs ಸುದೀಪ್ ನಡುವೆ ಸ್ಪರ್ಧೆ ಬಾಕ್ಸ್ ಆಫೀಸ್‌ನಲ್ಲಿ ಸವಾಲು ಉಪೇಂದ್ರ ಹಾಗೂ ಸುದೀಪ್ ಒಳ್ಳೆಯ ಗೆಳೆಯರು ಇಬ್ಬರೂ ಸಹ ‘ಮುಕುಂದ ಮುರಾರಿ’, ‘ಕಬ್ಜ’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ


ಉಪೇಂದ್ರ vs ಸುದೀಪ್ ನಡುವೆ ಸ್ಪರ್ಧೆ ಬಾಕ್ಸ್ ಆಫೀಸ್‌ನಲ್ಲಿ ಸವಾಲು ಉಪೇಂದ್ರ ಹಾಗೂ ಸುದೀಪ್ ಒಳ್ಳೆಯ ಗೆಳೆಯರು ಇಬ್ಬರೂ ಸಹ ‘ಮುಕುಂದ ಮುರಾರಿ’, ‘ಕಬ್ಜ’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆದರೆ ಈಗ ಇಬ್ಬರ ನಡುವೆ ಬಾಕ್ಸ್ ಆಫೀಸ್‌ನಲ್ಲಿ ಫೈಟ್ ಶುರುವಾಗಿದೆ. ಇಬ್ಬರಲ್ಲಿ ಗೆಲ್ಲುವವರು ಯಾರು ಸುದೀಪ್ ಹಾಗೂ ಉಪೇಂದ್ರ ‘ಮುಕುಂದ-ಮುರಾರಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರ ನಡುವೆ ಉತ್ತಮ ಗೆಳೆತನ ಇದೆ ಆದರೆ ಈಗ ಈ ಇಬ್ಬರ ನಡುವೆ ಬಾಕ್ಸ್ ಆಫೀಸ್‌ನಲ್ಲಿ ಸ್ಪರ್ಧೆ ಶುರುವಾಗಿದೆ. ನಿನ್ನೆಯಷ್ಟೆ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಸಿನಿಮಾ ಡಿಸೆಂಬರ್ 25 ರಂದು ತೆರೆಗೆ ಬರಲಿದೆ. ಆದರೆ ಅದರ ಐದು ದಿನ ಮುಂಚೆ ಅಂದರೆ ಡಿಸೆಂಬರ್ 20 ರಂದು ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಬಿಡುಗಡೆ ಆಗಲಿದೆ.ಇಬ್ಬರು ದೊಡ್ಡ ನಟರ ಸಿನಿಮಾಗಳು ಕೇವಲ ಐದು ದಿನಗಳ ಅಂತರದಲ್ಲಿ ಬಿಡುಗಡೆ ಆಗುತ್ತಿರುವುದು ಮಾರುಕಟ್ಟೆ ದೃಷ್ಟಿಯಿಂದ ಒಳ್ಳೆಯದಲ್ಲ ಅಲ್ಲದೆ ಸಿನಿಮಾ ಪ್ರೇಮಿಗಳಿಗೂ ಇದು ಬೇಸರದ ಸಂಗತಿ. ಇದು ಚಿತ್ರರಂಗದಿಂದ ಒಳಿತಲ್ಲ. ಆದರೆ ಸುದೀಪ್ರ ‘ಮ್ಯಾಕ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಬಳಿಕ ‘ಯುಐ’ ಸಿನಿಮಾದ ಬಿಡುಗಡೆ ದಿನಾಂಕ ಬದಲಾಯಿಸಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿಯನ್ನು ತಳ್ಳಿ ಹಾಕಿರುವ ‘ಯುಐ’ ಸಿನಿಮಾದ ನಿರ್ಮಾಪಕ ಕೆಪಿ ಶ್ರೀಕಾಂತ್, ‘ಯಾವುದೇ ಕಾರಣಕ್ಕೂ ನಾವು ‘ಯುಐ’ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿಲ್ಲ. ಪಿವಿಆರ್ ಇನ್ನಿತರೆ ಕಡೆಗಳಲ್ಲಿ ಜಾಹೀರಾತು ಪೋಸ್ಟರ್ಗಳನ್ನು ಪ್ರದರ್ಶಿಸಲು ಈಗಾಗಲೇ ಆರಂಭ ಮಾಡಿದ್ದೇವೆ. ಹೀಗಿರುವಾಗ ನಾವು ಸಿನಿಮಾದ ಬಿಡುಗಡೆ ಮುಂದೂಡುವುದಿಲ್ಲ, ಡಿಸೆಂಬರ್ 20ಕ್ಕೆ ನಮ್ಮ ಸಿನಿಮಾ ಬಿಡುಗಡೆ ಆಗುವುದು ಪಕ್ಕಾ’ ಎಂದು ಹೇಳಿದ್ದಾರೆ.ಇಬ್ಬರ ಸಿನಿಮಾಗಳಲ್ಲಿ ಯಾವುದು ಬಾಕ್ಸ್ ಆಫೀಸ್‌ನಲ್ಲಿ ಗಿನ್ನೆಸ್ ಬಾರಿಸುತ್ತದೆ ಎಂಬುದು ಕಾದು ನೋಡಬೇಕಾಗಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
