UI ರಿಲೀಸ್‌ಗೂ ಮುನ್ನ ಉಪೇಂದ್ರ & ಟೀಮ್ ಟೆಂಪಲ್ ರನ್ ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ ‘ಯುಐ’ ಸಿನಿಮಾ ಡಿಸೆಂಬರ್ 20ಕ್ಕೆ ರಿಲೀಸ್ ಆಗಲು ಸಜ್ಜಾಗಿದೆ. ರಿಲೀಸ್‌ಗೂ ಮುನ್ನ ಉಪೇಂದ್ರ ಹಾಗೂ ಚಿತ್ರತಂಡ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಕೊರಗಜ್ಜ ದೈವ ದರ್ಶನ ಪಡೆದಿದ್ದಾರೆ. ಚಿತ್ರ ತಂಡದ ಸದಸ್ಯರು, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಲಹರಿ ವೇಲು ಮತ್ತು ನವೀನ್ ಮನೋಹರನ್ ಅವರೊಂದಿಗೆ ಉಪೇಂದ್ರ ಪೂಜಾ ಕರ್ಯದಲ್ಲಿ ಪಾಲ್ಗೊಂಡರು. ಟ್ರೈಲರ್ ಸದ್ದು‘ಯುಐ’ ಟ್ರೈಲರ್ ಈಗಾಗಲೇ ಸಂಚಲನ ಮೂಡಿಸಿದ್ದು, ಹಸಿವಿನ ಹೋರಾಟ, ಜಾತಿ, ಅಧಿಕಾರ ವಿಷಯಗಳನ್ನು ರೋಚಕವಾಗಿ ಮುನ್ನೋಟ ನೀಡಿದೆ. “ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ” ಎಂಬ ಉಪೇಂದ್ರನ ಡೈಲಾಗ್ ಫ್ಯಾನ್ಸ್ ಮನಸೆಳೆಯುತ್ತಿದೆ. ಪ್ರೇಕ್ಷಕರ ನಿರೀಕ್ಷೆ 2040ರ ಭವಿಷ್ಯವಾಣಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಕಾನ್ಸೆಪ್ಟ್ ಮತ್ತು ಸಸ್ಪೆನ್ಸ್ ಪ್ರಮುಖ ಆಕರ್ಷಣೆ. ಉಪೇಂದ್ರಗೆ ರೀಷ್ಮಾ ನಾಣಯ್ಯ ಜೋಡಿಯಾಗಿದ್ದು, ಲಹರಿ ಫಿಲಂಸ್ ಹಾಗೂ ವೀನಸ್ಎಂಟರ್‌ಟೈನರ್ಸ್ ಬೃಹತ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಿದ್ದಾರೆ. ಫ್ಯಾನ್ಸ್ ಕಾತುರ ಸಿನಿಮಾ ರಿಲೀಸ್‌ಗೆ ದಿನಗಣನೆ ಆರಂಭವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚುತ್ತಿದೆ.