Back to Top

ಉಪೇಂದ್ರ ನಟನೆಯ ‘ಯುಐ’ ವಾರ್ನರ್‌ ರಿಲೀಸ್

SSTV Profile Logo SStv December 2, 2024
ಉಪೇಂದ್ರ ನಟನೆಯ ‘ಯುಐ’ ವಾರ್ನರ್‌ ರಿಲೀಸ್
ಉಪೇಂದ್ರ ನಟನೆಯ ‘ಯುಐ’ ವಾರ್ನರ್‌ ರಿಲೀಸ್
ಉಪೇಂದ್ರ ನಟನೆಯ ‘ಯುಐ’ ವಾರ್ನರ್‌ ರಿಲೀಸ್ ಉಪೇಂದ್ರ ಅಭಿನಯಿಸಿ, ನಿರ್ದೇಶನ ಮಾಡಿದ ಬಹುದೊಡ್ಡ ಪ್ರಾಜೆಕ್ಟ್ ‘ಯುಐ’ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದ್ದು, ಅಭಿಮಾನಿಗಳಲ್ಲಿ ಭಾರಿ ಕೌತುಕ ಮೂಡಿಸಿದೆ. ಎಐ (AI) ಯುಗದಲ್ಲಿ, futuristic ಕಥೆಯೊಂದಿಗೆ, ಉಪೇಂದ್ರ ಡಿಫರೆಂಟ್ ಲುಕ್‌ ಹಾಗೂ ಪವರ್‌ಫುಲ್‌ ಡೈಲಾಗ್‌ ಮೂಲಕ ಗಮನ ಸೆಳೆದಿದ್ದಾರೆ. ಜಾತಿ, ಅಧಿಕಾರ, ಮತ್ತು ಹಸಿವಿನ ಹೊಡೆದಾಟ ಸಾರುವ ಈ ಟ್ರೈಲರ್‌ ಜನರ ಬುದ್ದಿವಂತಿಕೆಗೆ ಸವಾಲು ಹಾಕುವಂತಿದ್ದು, “ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ” ಎಂಬ ಉಪೇಂದ್ರ ಡೈಲಾಗ್‌ ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿದೆ. 2040ನೇ ಇಸವಿಯ ಭವಿಷ್ಯದ ಕಥಾಹಂದರ ಚಿತ್ರದಲ್ಲಿ ರೋಚಕತೆಯನ್ನು ಹೆಚ್ಚಿಸಿದೆ. ರೀಷ್ಮಾ ನಾಣಯ್ಯ ಉಪೇಂದ್ರಗೆ ನಾಯಕಿಯಾಗಿ ಅಭಿನಯಿಸಿದ್ದು, ಈ ಸಿನಿಮಾವನ್ನು ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಜೊತೆಯಾಗಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಡಿಸೆಂಬರ್ 20ಕ್ಕೆ ‘ಯುಐ’ ತೆರೆಗೆ ಬರಲು ಸಜ್ಜಾಗಿದೆ, ಪ್ರೇಕ್ಷಕರು ಇದೀಗ ಬಿಡುಗಡೆಯ ಕಾತುರದಲ್ಲಿದ್ದಾರೆ.