Back to Top

‘ನಾನು ಉಪೇಂದ್ರ ಫ್ಯಾನ್’ ಯುಐ 'ವಾರ್ನರ್ '​ ನೋಡಿ ಆಮಿರ್ ಖಾನ್ ಫಿದಾ

SSTV Profile Logo SStv December 12, 2024
ಯುಐ 'ವಾರ್ನರ್ '​ ನೋಡಿ ಆಮಿರ್ ಖಾನ್ ಫಿದಾ
ಯುಐ 'ವಾರ್ನರ್ '​ ನೋಡಿ ಆಮಿರ್ ಖಾನ್ ಫಿದಾ
‘ನಾನು ಉಪೇಂದ್ರ ಫ್ಯಾನ್’ ಯುಐ 'ವಾರ್ನರ್ '​ ನೋಡಿ ಆಮಿರ್ ಖಾನ್ ಫಿದಾ ಡಿಸೆಂಬರ್ 20 ರಂದು ತೆರೆ ಕಾಣಲಿರುವ ಸೂಪರ್‌ ಸ್ಟಾರ್‌ ಉಪೇಂದ್ರ ನಟಿಸಿ ನಿರ್ದೇಶಿಸಿರುವ ‘ಯುಐ’ (UI) ಸಿನಿಮಾಗೆ ಬಾಲಿವುಡ್‌ ಸ್ಟಾರ್‌ ಆಮೀರ್‌ ಖಾನ್‌ ಶುಭ ಹಾರೈಸಿದ್ದಾರೆ. ಆಮೀರ್‌ ಖಾನ್‌ ವೀಡಿಯೋವನ್ನು ಹಂಚಿಕೊಂಡು, ಉಪೇಂದ್ರ ಮತ್ತು ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. “ನಾನು ಉಪೇಂದ್ರ ಅವರ ಅಭಿಮಾನಿ. ಅವರ ಯುಐ ಸಿನಿಮಾದ ಟ್ರೈಲರ್‌ ನೋಡಿ, ಇದು ನಿಜಕ್ಕೂ ಅದ್ಭುತ. ಟ್ರೈಲರ್‌ ಊಹಿಸಲಾಗದ ರೀತಿಯಲ್ಲಿದ್ದು, ಇದು ನನ್ನ ಮೇಲೆ ದೊಡ್ಡ ಶಾಕ್‌ ನೀಡಿತು. ಹಿಂದಿ ಅಭಿಮಾನಿಗಳೂ ಇದನ್ನು ಇಷ್ಟ ಪಟ್ಟಿದ್ದಾರೆ,” ಎಂದು ಆಮೀರ್‌ ಖಾನ್‌ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಹಾರೈಕೆಗೆ ನಟ ಉಪೇಂದ್ರ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ‘ಯುಐ’ ಸಿನಿಮಾ ಹಿನ್ನಲೆಯು ಹೈಪನ್ನು ಹೆಚ್ಚಿಸಿದ್ದು, ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಆತುರದಿಂದ ಕಾಯುತ್ತಿದ್ದಾರೆ.