ಉಪೇಂದ್ರ ನಿರ್ದೇಶನದ ‘ಯುಐ’ ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಖರೀದಿ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರ ‘ಯುಐ’ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಕುತೂಹಲ ಮೂಡಿಸಿದೆ. ಈ ಚಿತ್ರಕ್ಕಾಗಿ ವಿತರಣೆ ಹಕ್ಕುಗಳನ್ನು ಹೆಸರುವಾಸಿಯಾದ ಕೆವಿಎನ್ ಪ್ರೊಡಕ್ಷನ್ಸ್ ಭಾರೀ ಮೊತ್ತಕ್ಕೆ ಖರೀದಿಸಿದೆ.
‘ಯುಐ’ ಚಿತ್ರವು ಡಿಸೆಂಬರ್ 20ರಂದು ಬಹುಭಾಷೆಯಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ಚಿತ್ರವನ್ನು ಲಹರಿ ಫಿಲಮ್ಸ್ ಹಾಗೂ ವೀನಸ್ ಎಂಟರ್ಟೈನರ್ಸ್ ಅಡಿಯಲ್ಲಿ ಮನೋಹರ್ ನಾಯ್ಡು ಮತ್ತು ಕೆ.ಪಿ. ಶ್ರೀಕಾಂತ್ ನಿರ್ಮಿಸಿದ್ದಾರೆ.
ಇನ್ನುಮೂಡಲೇ ಚಿತ್ರಕ್ಕೆ ಇತರೆ ಭಾಷೆಗಳಲ್ಲಿ ವಿತರಣೆ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದು, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಪ್ರತಿ ಭಾಷೆಯಲ್ಲಿ ಚಿತ್ರಕ್ಕೆ ದೊಡ್ಡ ಬೇಡಿಕೆಯಿದೆ. ಕೆವಿಎನ್ ಪ್ರೊಡಕ್ಷನ್ಸ್ ಈಗ ಕನ್ನಡದಲ್ಲಿ ‘ಯುಐ’ ಹಂಚಿಕೆ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಪಡೆದುಕೊಂಡು ಮತ್ತೊಮ್ಮೆ ಗಮನಸೆಳೆದಿದೆ.
ಉಪೇಂದ್ರನ ಈ ಬಿಗ್‌ಬಜೆಟ್ ಸಿನಿಮಾಗೆ ಅಭಿಮಾನಿಗಳು ಉತ್ಸುಕರಾಗಿದ್ದು, ಡಿಸೆಂಬರ್‌ನಲ್ಲಿ ಸಿನಿಮಾದ ಬಿಡುಗಡೆಗೆ ಕನ್ನಡ ಚಿತ್ರರಂಗ ಕಾತುರವಾಗಿದೆ.