Back to Top

2040ರ ಭವಿಷ್ಯವಾಣಿ 'ಯುಐ' ಸೀಕ್ರೆಟ್‌ ಬಿಚ್ಚಿಟ್ಟ ಉಪೇಂದ್ರ

SSTV Profile Logo SStv December 3, 2024
'ಯುಐ' ಸೀಕ್ರೆಟ್‌ ಬಿಚ್ಚಿಟ್ಟ ಉಪೇಂದ್ರ
'ಯುಐ' ಸೀಕ್ರೆಟ್‌ ಬಿಚ್ಚಿಟ್ಟ ಉಪೇಂದ್ರ
2040ರ ಭವಿಷ್ಯವಾಣಿ 'ಯುಐ' ಸೀಕ್ರೆಟ್‌ ಬಿಚ್ಚಿಟ್ಟ ಉಪೇಂದ್ರ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದ ‘ಯುಐ’ ಸಿನಿಮಾ ಡಿಸೆಂಬರ್ 20ಕ್ಕೆ ರಿಲೀಸ್‌ಗೆ ಸಜ್ಜಾಗಿದೆ. ಹಸಿವಿನ ಹೋರಾಟ, ಜಾತಿ, ಅಧಿಕಾರದ ರಾಜಕಾರಣ ಈ ಎಲ್ಲವನ್ನೂ 2040ರ ಭವಿಷ್ಯದ ಕನ್ನದಲ್ಲಿ ಉಪೇಂದ್ರ ಕಣ್ತುಂಬಿಸುವ ತರದಲ್ಲಿ ಚಿತ್ರ ನೀಡಿದ್ದಾರೆ. AI ಯುಗದ ಕನ್ನಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ, "ಇದು ತಲೆ ಕೆಡಿಸೋ ಸಿನಿಮಾ ಅಲ್ಲ, ತಲೆ ತೊಳೆಯೋ ಸಿನಿಮಾ" ಎಂದಿದ್ದಾರೆ. ಪ್ರೇಕ್ಷಕರ ಬುದ್ಧಿವಂತಿಕೆಗೆ ಸಿನಿಮಾ ಸವಾಲು ಹಾಕುವುದಾಗಿ ಹೇಳಿದ ಉಪ್ಪಿ, “ಯು + ಐ = ಸಮಸ್ಯೆಗಳ ಪರಿಹಾರ” ಎಂಬ ರಹಸ್ಯವನ್ನು ಬಿಚ್ಚಿಟ್ಟರು. ಟ್ರೈಲರ್‌ನಲ್ಲಿ ಮಿಷನ್‌ ಯುಐ ಟ್ರೈಲರ್‌ನಲ್ಲಿ ಹಸಿವಿನ ಜನರ ಹೊಡೆದಾಟ, ರಕ್ತಪಾತ, ಜಾತಿ-ಅಧಿಕಾರದ ಪೈಪೋಟಿ ಎಲ್ಲವೂ ಕಣ್ಮನ ಸೆಳೆಯುತ್ತವೆ. “ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ” ಎಂಬ ಉಪ್ಪಿಯ ಡೈಲಾಗ್ ಸಖತ್ ಇಂಪ್ಯಾಕ್ಟ್ ಕ್ರಿಯೇಟ್ ಮಾಡಿದೆ. ಸ್ಟಾರ್ ಕ್ಯಾಸ್ಟ್ ಈ ಭವ್ಯ ಚಿತ್ರದಲ್ಲಿ ಉಪೇಂದ್ರಗೆ ರೀಷ್ಮಾ ನಾಣಯ್ಯ ಜೋಡಿಯಾಗಿ ಕಾಣಸಿಗಲಿದ್ದು, ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್‌ಟೈನರ್ಸ್ ಆಧುನಿಕ ತಂತ್ರಜ್ಞಾನ ಬಳಸಿ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. 2040ರ ಹೊಸ ಯುಗದ ಕನಸು ಏನೆಂಬುದು ಡಿ.20ಕ್ಕೆ ತೆರೆಮೇಲೆ ಬರುತ್ತದೆ.