ಯುಐ ಸಿನಿಮಾದಲ್ಲಿ ಸನ್ನಿ ಲಿಯೋನ್ ಕಾಣದೇ ಫ್ಯಾನ್ಸ್ ನಿರಾಸೆ


ಯುಐ ಸಿನಿಮಾದಲ್ಲಿ ಸನ್ನಿ ಲಿಯೋನ್ ಕಾಣದೇ ಫ್ಯಾನ್ಸ್ ನಿರಾಸೆ ಕನ್ನಡದ ಬಹು ನಿರೀಕ್ಷಿತ ಯುಐ ಸಿನಿಮಾದಲ್ಲಿ ಸನ್ನಿ ಲಿಯೋನ್ ಅಭಿನಯಿಸಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಹರಿದಾಡಿತ್ತು. ಶೂಟಿಂಗ್ ಫೋಟೋಗಳು, ಪೋಸ್ಟರ್‌ಗಳು ಈ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಆದರೆ, 2 ಗಂಟೆ 12 ನಿಮಿಷದ ಚಿತ್ರದ ಪ್ರಗಟನೆಯಲ್ಲಿ ಎಲ್ಲೂ ಸನ್ನಿ ಲಿಯೋನ್ ಕಾಣಿಸದಿರುವುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಸನ್ನಿ ಲಿಯೋನ್ ಮತ್ತು ಉಪೇಂದ್ರ ಅವರ ಶೂಟಿಂಗ್ ಸಮಯದ ಫೋಟೋಗಳು ವೈರಲ್ ಆಗಿದ್ದರೂ, ಚಿತ್ರದ ಅಂತಿಮ ಪ್ರಸ್ತುತಿಕರಣದಲ್ಲಿ ಸನ್ನಿ ಪಾತ್ರ ಎಡಿಟ್ ಆಗಿತೇ ಎನ್ನುವ ಪ್ರಶ್ನೆ ಮೂಡಿದೆ. ಸಿನಿಮಾ ತಂಡ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ.
ಇದರ ನಡುವೆ, ಯುಐ ಚಿತ್ರ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದ್ದು, ಸಿನಿಮಾದ ವಿಭಿನ್ನ ಶೈಲಿಯು ಮತ್ತೊಮ್ಮೆ ನೋಡುವಂತೆ ಮಾಡುತ್ತದೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಸನ್ನಿ ಲಿಯೋನ್ ನಿರೀಕ್ಷೆ ಪೂರೈಸದರೂ, ಯುಐ ಹೊಸ ಚರ್ಚೆಗೆ ಪ್ರೇರಣೆಯಾಗಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
