‘ಯುಐ’ ಚಿತ್ರದಲ್ಲಿ ನಟಿಸುವುದು ನನ್ನ ಅದೃಷ್ಟ ನಿಧಿ ಸುಬ್ಬಯ್ಯ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಮತ್ತು ನಟನೆಯ ಬಹುನಿರೀಕ್ಷಿತ ಚಿತ್ರ ‘ಯುಐ’ ಡಿಸೆಂಬರ್ 20ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಒಂದು ಭಾಗವಾಗಿರುವ ನಟಿ ನಿಧಿ ಸುಬ್ಬಯ್ಯ, "ಉಪೇಂದ್ರ ಸರ್ ಅವರ ಸಿನಿಮಾದಲ್ಲಿ ಕೆಲಸ ಮಾಡುವುದು ನನ್ನ ಅದೃಷ್ಟ" ಎಂದು ಸಂತಸ ವ್ಯಕ್ತಪಡಿಸಿದರು. "ನಾನು ಅವರ ದೊಡ್ಡ ಅಭಿಮಾನಿ. ‘ಯುಐ’ ನನಗೆ ಹೊಸ ಅನುಭವವನ್ನು ನೀಡಿದೆ," ಎಂದು ಹೇಳಿದರು.
ಬಿಗ್ ಬಾಸ್ ಖ್ಯಾತಿಯ ನೀತು ವನಜಾಕ್ಷಿ ಸಹ ಚಿತ್ರದ ಬಗ್ಗೆ ತಮ್ಮ ಸಂತಸ ಹಂಚಿಕೊಂಡು, "ಉಪೇಂದ್ರ ಸರ್ ನಿರ್ದೇಶನದಲ್ಲಿ ನಟಿಸುವುದು ನನ್ನ ಜೀವನದ ಪ್ರಮುಖ ಕ್ಷಣ. ಅವರ ನಿರ್ದೇಶನದಲ್ಲಿ ಪಾತ್ರ ಸಿಕ್ಕಿದ್ದು ನನ್ನ ಹೆಮ್ಮೆ" ಎಂದು ಹೇಳಿದರು.
ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದೇ, ಡಿ.20ಕ್ಕೆ ಚಿತ್ರ ನೋಡಿದ ಬಳಿಕವೇ ಪ್ರೇಕ್ಷಕರಿಗೆ ಉತ್ತರ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್, ಡಾಲಿ, ವಿಜಯ್, ಡಾ.ಸೂರಿ, ಪವನ್ ಒಡೆಯರ್, ನಿರ್ಮಾಪಕ ರಮೇಶ್ ರೆಡ್ಡಿ, ಕಾರ್ತಿಕ್ ಗೌಡ ಸೇರಿದಂತೆ ಸ್ಯಾಂಡಲ್‌ವುಡ್‌ನ ಅನೇಕ ಗಣ್ಯರು ಭಾಗವಹಿಸಿ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ‘ಯುಐ’ ಬಿಡುಗಡೆಯ ನಿರೀಕ್ಷೆಯೊಂದಿಗೆ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ.