Back to Top

‘ಟಾಕ್ಸಿಕ್’ ಸಿನಿಮಾ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

SSTV Profile Logo SStv December 6, 2024
‘ಟಾಕ್ಸಿಕ್’ ಸಿನಿಮಾ ಎಫ್‌ಐಆರ್‌
‘ಟಾಕ್ಸಿಕ್’ ಸಿನಿಮಾ ಎಫ್‌ಐಆರ್‌
‘ಟಾಕ್ಸಿಕ್’ ಸಿನಿಮಾ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಮೇಲೆ ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪಿಸಿ ದಾಖಲಿಸಿದ್ದ ಎಫ್‌ಐಆರ್‌ ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ಸ್ ನಿರ್ಮಾಣದ ಈ ಚಿತ್ರ ತಂಡ, ಮರಗಳನ್ನು ಅಕ್ರಮವಾಗಿ ಕಡಿದು ಸೆಟ್ ನಿರ್ಮಾಣ ಮಾಡಿದೆ ಎಂಬ ಅರಣ್ಯ ಇಲಾಖೆಯ ದೂರು ಹಿನ್ನಲೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅರಣ್ಯ ಸಚಿವ ಈಶ್ವರ ಖಂಡ್ರೆಯ ಸಹ ಸ್ಥಳ ಪರಿಶೀಲನೆ ನಡೆಸಿ, ಸ್ಯಾಟಲೈಟ್ ಚಿತ್ರಗಳ ಮೂಲಕ ಆರೋಪವನ್ನು ಸಮರ್ಥಿಸಲು ಪ್ರಯತ್ನಿಸಲಾಗಿತ್ತು. ಆದರೆ, ನಿರ್ಮಾಪಕರ ವಕೀಲರು, ಸೆಟ್ ಅರಣ್ಯ ಭೂಮಿಯಲ್ಲಿಲ್ಲ ಎಂಬುದು ಮತ್ತು ಮರಗಳನ್ನು ಕಡಿಯಲಿಲ್ಲ ಎಂಬ ವಾದವನ್ನು ನ್ಯಾಯಾಲಯದಲ್ಲಿ ಮಂಡಿಸಿದರು. ಈ ವಿಚಾರಣೆ ನಂತರ, ನ್ಯಾಯಮೂರ್ತಿಗಳು ಮಧ್ಯಂತರ ತಡೆ ಆಜ್ಞೆ ನೀಡಿದ್ದು, ಹೀಗಾಗಿ ಟಾಕ್ಸಿಕ್ ಚಿತ್ರತಂಡ ಶೂಟಿಂಗ್ ಮುಂದುವರಿಸಲು ನಿರಾಳವಾಗಿದೆ. ಸಿನಿಮಾದ ಚಿತ್ರೀಕರಣ ಬೆಂಗಳೂರು ಮುಗಿಸಿದ ತಂಡ ಈಗ ಮುಂಬೈಗೆ ಸ್ಥಳಾಂತರವಾಗಿದೆ. ನಯನತಾರಾ, ಕಿಯಾರಾ ಅಡ್ವಾಣಿ ಸೇರಿ ಹಲವು ಖ್ಯಾತ ನಟ-ನಟಿಯರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.