Back to Top

ಕಮಲ್ ಹಾಸನ್ ಮತ್ತು ಮಣಿರತ್ನಂ 'ಥಗ್ ಲೈಫ್' ಬಿಡುಗಡೆ ದಿನಾಂಕ ಘೋಷಣೆ

SSTV Profile Logo SStv November 8, 2024
'ಥಗ್ ಲೈಫ್' ಬಿಡುಗಡೆ ದಿನಾಂಕ ಘೋಷಣೆ
'ಥಗ್ ಲೈಫ್' ಬಿಡುಗಡೆ ದಿನಾಂಕ ಘೋಷಣೆ
ಕಮಲ್ ಹಾಸನ್ ಮತ್ತು ಮಣಿರತ್ನಂ 'ಥಗ್ ಲೈಫ್' ಬಿಡುಗಡೆ ದಿನಾಂಕ ಘೋಷಣೆ 37 ವರ್ಷಗಳ ನಂತರ, ಕಮಲ್ ಹಾಸನ್ ಮತ್ತು ಮಣಿರತ್ನಂ ಜೋಡಿ ಮತ್ತೆ 'ಥಗ್ ಲೈಫ್' ಚಿತ್ರದೊಂದಿಗೆ ತಯಾರಾಗಿದ್ದಾರೆ. ಈ ಬಹು ನಿರೀಕ್ಷಿತ ಚಿತ್ರವು 2025ರ ಜೂನ್ 5 ರಂದು ಪ್ರಪಂಚದಾದ್ಯಂತ ಬಿಡುಗಡೆಗೊಳ್ಳಲಿದೆ. ಕಮಲ್ ಹಾಸನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಯಿತು. ರಾಜ್ ಕಮಲ್ ಫಿಲ್ಮ್ಸ್ ಮತ್ತು ಮದ್ರಾಸ್ ಟಾಕೀಸ್ ಸಹ-ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಥಗ್ ಲೈಫ್' ಚಿತ್ರದಲ್ಲಿ, ಕಮಲ್ ಹಾಸನ್ ಜೊತೆ ಸಿಲಂಬರಸನ್ ಟಿಆರ್, ತ್ರಿಷಾ, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಅಭಿರಾಮಿ ಮತ್ತು ನಾಸರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಎ.ಆರ್. ರೆಹಮಾನ್ ಅವರ ಸಂಗೀತ ಈ ಚಿತ್ರಕ್ಕೆ ಮತ್ತೊಂದು ಹೈಲೈಟ್ ಆಗಿದ್ದು, ಮಣಿರತ್ನಂ ಅವರ ನಿರ್ದೇಶನದಲ್ಲಿ ರವಿ ಆರ್ ಚಂದ್ರನ್ ಸಿನಿಮಾಟೋಗ್ರಫಿ ಮತ್ತು ಅನ್ಬರಿವ್ ಅವರ ಆ್ಯಕ್ಷನ್ ಕೋರಿಯಾಗ್ರಫಿ ಈ ಚಿತ್ರಕ್ಕೆ ಶಕ್ತಿ ಹೆಚ್ಚಿಸಿದೆ. ಈ ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಸಿದೆ.