Back to Top

ತಿಮ್ಮಪ್ಪನ ದರ್ಶನ ಪಡೆದ ಶಿವಣ್ಣ: ಕ್ಯಾನ್ಸರ್ ಜಯಿಸಿದ ನಂತರ ತಿರುಪತಿಗೆ ಭೇಟಿ

SSTV Profile Logo SStv July 28, 2025
ತಿಮ್ಮಪ್ಪನ ದರ್ಶನ ಪಡೆದ ಶಿವಣ್ಣ
ತಿಮ್ಮಪ್ಪನ ದರ್ಶನ ಪಡೆದ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಸಮೇತರಾಗಿ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಅಮೆರಿಕದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದು ಚೇತರಿಸಿಕೊಂಡ ನಂತರ, ಧನ್ಯತಾಪೂರ್ವಕವಾಗಿ ತಿಮ್ಮಪ್ಪನ ಶರಣಾಗಿ ತಿರುಪತಿ ಯಾತ್ರೆ ನಡೆಸಿದ್ದಾರೆ.

ಇದಕ್ಕೂ ಮುನ್ನ, ಚಿಕಿತ್ಸೆ ಆರಂಭಿಸುವ ಮೊದಲು ಕೂಡ ಶಿವಣ್ಣ ತಿರುಪತಿ ಭೇಟಿ ನೀಡಿ ದೇವರ ಕೃಪೆ ಯಾಚಿಸಿದ್ದರು. ಇದೀಗ ಚಿಕಿತ್ಸೆ ಯಶಸ್ವಿಯಾಗಿ ಮುಗಿಸಿ ತಾನು ಚೇತರಿಸಿಕೊಂಡಿದ್ದು ತಿಮ್ಮಪ್ಪನ ಕೃಪೆಯೆಂದು ಭಾವಿಸಿರುವ ಶಿವಣ್ಣ, ಮತ್ತೊಮ್ಮೆ ದರ್ಶನ ಪಡೆದುಕೊಂಡಿದ್ದಾರೆ.

ಕ್ಯಾನ್ಸರ್‌ಗೆ ವಿಜಯ ಸಾಧಿಸಿದ ನಂತರ, ತಮ್ಮ ಅನುಭವಗಳನ್ನು ಡಾಕ್ಯುಮೆಂಟರಿಯಾಗಿ ಹಂಚಿಕೊಳ್ಳುವ ನಿರ್ಧಾರವಿರುವ ಶಿವರಾಜ್ ಕುಮಾರ್, ಶೀಘ್ರದಲ್ಲೇ ಈ ಪ್ರಾಜೆಕ್ಟ್‌ ಕಡೆ ಗಮನ ಹರಿಸಲಿದ್ದಾರೆ. ರಕ್ತಸ್ರಾವದಿಂದ ಆರಂಭವಾದ ಸಮಸ್ಯೆಗೆ ತಕ್ಷಣವೇ ಕೀಮೋ ಥೆರಪಿ ತೆಗೆದುಕೊಳ್ಳಬೇಕೆಂದು ವೈದ್ಯರು ಸೂಚಿಸಿದ್ದರು ಎಂದು ಅವರು ಹಂಚಿಕೊಂಡಿದ್ದಾರೆ.

“ಕೂದಲು ಉದುರುತ್ತೆ ಅಂತ ಭಯವಾಯ್ತು. ಕೀಮೋ ತೆಗೆದುಕೊಂಡ ಎರಡು ದಿನಗಳಲ್ಲೇ ಆ್ಯಕ್ಷನ್ ಶೂಟಿಂಗ್ ಮಾಡಿದ್ದೆ. ನನ್ನೊಳಗಿನ ಧೈರ್ಯ ನನ್ನನ್ನು ಮುಂದೆ ನಡಸಿತ್ತು,” ಎಂದು ಶಿವಣ್ಣ ತಮ್ಮ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಶಿವಣ್ಣನ ಧೈರ್ಯ ಹಾಗೂ ಧಾರ್ಮಿಕ ನಂಬಿಕೆ ಇದೀಗ ಅವರ ಅಭಿಮಾನಿಗಳ ಹೃದಯ ಗೆದ್ದಿದ್ದು, ತಿಮ್ಮಪ್ಪನ ದರ್ಶನದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.