Back to Top

ಭೀಮನ ಅಮಾವಾಸ್ಯೆ ಪ್ರಯುಕ್ತ ತರುಣ್ ಸುಧೀರ್ ಪಾದಪೂಜೆ ಮಾಡಿದ ನಟಿ ಸೋನಲ್ – ಕ್ಯೂಟ್ ಮೋಮೆಂಟ್ ವೈರಲ್!

SSTV Profile Logo SStv July 25, 2025
ತರುಣ್ ಸುಧೀರ್ ಪಾದಪೂಜೆ ಮಾಡಿದ ನಟಿ ಸೋನಲ್
ತರುಣ್ ಸುಧೀರ್ ಪಾದಪೂಜೆ ಮಾಡಿದ ನಟಿ ಸೋನಲ್

ಆಷಾಢ ಮಾಸದ ಕೊನೆಯ ದಿನ, ಭೀಮನ ಅಮಾವಾಸ್ಯೆ ವಿಶೇಷವಾಗಿ ಮದುವೆಯಾದ ಮಹಿಳೆಯರು ಪತಿಯ ದೀರ್ಘಾಯುಷ್ಯಕ್ಕಾಗಿ ಪಾದಪೂಜೆ ಮಾಡುವ ಸಂಪ್ರದಾಯ. ಈ ಸಾಂಪ್ರದಾಯಿಕ ಆಚರಣೆಯನ್ನು ನಟಿ ಸೋನಲ್ ಮೊಂಥೆರೋ ಸಹ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ 11 ರಂದು ತರುಣ್ ಸುಧೀರ್ ಅವರೊಂದಿಗೆ ವಿವಾಹವಾದ ಸೋನಲ್, ಭೀಮನ ಅಮಾವಾಸ್ಯೆ ಪ್ರಯುಕ್ತ ಪತಿಯ ಪಾದಪೂಜೆ ಮಾಡಿದ್ದಾರೆ. ಈ ವಿಶೇಷ ಕ್ಷಣದ ಫೋಟೋಗಳನ್ನು ಸೋನಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕ್ಯಾಪ್ಷನ್‌ನಲ್ಲಿ "ನಿಮ್ಮಂತಹ ಪತಿ ಲಕ್ಷದಲ್ಲಿ ಒಬ್ಬ, ಪ್ರತಿದಿನವೂ ನಿಮ್ಮ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಭಾವಪೂರ್ಣವಾಗಿ ಬರೆದಿದ್ದಾರೆ.

ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿರುವ ಈ ಜೋಡಿ, ಭಕ್ತಿಯಿಂದ ಕೂಡಿದ ಸಂಪ್ರದಾಯವನ್ನು ಹೃದಯದಿಂದ ಆಚರಿಸಿ ಎಲ್ಲರ ಮನಸ್ಸು ಗೆದ್ದಿದ್ದಾರೆ.