Back to Top

ಸುಪ್ರೀಂನಲ್ಲಿ ತೀವ್ರ ವಾದ – ದರ್ಶನ್ ಪತ್ನಿ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು

SSTV Profile Logo SStv July 24, 2025
ಥಾಯ್ಲೆಂಡ್‌ನಲ್ಲಿ ಮ್ಯಾಂಗೋ ಸ್ಟಿಕ್ಕಿ ರೈಸ್ ಎಂಜಾಯ್ ಮಾಡಿದ ದರ್ಶನ್ ಪತ್ನಿ
ಥಾಯ್ಲೆಂಡ್‌ನಲ್ಲಿ ಮ್ಯಾಂಗೋ ಸ್ಟಿಕ್ಕಿ ರೈಸ್ ಎಂಜಾಯ್ ಮಾಡಿದ ದರ್ಶನ್ ಪತ್ನಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ನಟ ದರ್ಶನ್ ತಮ್ಮ ಕುಟುಂಬದೊಂದಿಗೆ ಥಾಯ್ಲೆಂಡ್‌ನಲ್ಲಿ ವಿಶ್ರಾಂತಿ ಕಳೆಯುತ್ತಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಂನಲ್ಲಿ ಮಧ್ಯಾಹ್ನದ ಊಟದ ಫೋಟೋ ಶೇರ್ ಮಾಡಿದ್ದು, ಕುಟುಂಬದಲಿ ಯಾವುದೇ ಆತಂಕವಿಲ್ಲದ ವಾತಾವರಣವಿದೆ ಎಂಬ ಸಂದೇಶವನ್ನು ತೋರಿಸುತ್ತಿದೆ. ಅವರು ಮ್ಯಾಂಗೋ ಸ್ಟಿಕ್ಕಿ ರೈಸ್ ಸವಿಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇತ್ತ ದರ್ಶನ್ ಜಾಮೀನು ಮುಂದುವರೆಯುತ್ತದೆಯೋ ಅಥವಾ ರದ್ದಾಗುತ್ತದೆಯೋ ಎಂಬ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಮುಂದಿನ 10 ದಿನಗಳಲ್ಲಿ ಪ್ರಕಟಿಸಲಿದೆ. ನಾಳೆ (ಶುಕ್ರವಾರ) ರಾತ್ರಿ ದರ್ಶನ್ ಕುಟುಂಬದ ಜೊತೆ ಬೆಂಗಳೂರಿಗೆ ಮರಳಲಿದ್ದಾರೆ ಎನ್ನಲಾಗಿದೆ.