Back to Top

"ಕನ್ನಡ ಹುಟ್ಟಿದ್ದು ತಮಿಳಿನಿಂದಾ? ಧ್ರುವ ಸರ್ಜಾ ತಮಿಳುನಾಡಿನಲ್ಲಿಯೇ ಕಮಲ್ ಹಾಸನ್‌ಗೆ ಖಡಕ್ ತಿರುಗೇಟು!"

SSTV Profile Logo SStv July 11, 2025
ತಮಿಳಿನಾಡಿನಲ್ಲೇ ತಿರುಗೇಟು ಕೊಟ್ಟ ಧ್ರುವ ಸರ್ಜಾ!
ತಮಿಳಿನಾಡಿನಲ್ಲೇ ತಿರುಗೇಟು ಕೊಟ್ಟ ಧ್ರುವ ಸರ್ಜಾ!

ತಮಿಳು ನಟ ಕಮಲ್ ಹಾಸನ್ ಅವರ "ಕನ್ನಡ ತಮಿಳಿನಿಂದ ಹುಟ್ಟಿದ ಭಾಷೆ" ಎಂಬ ವಿವಾದಾತ್ಮಕ ಹೇಳಿಕೆಗೆ ಪ್ರತಿಯಾಗಿ ಕನ್ನಡದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಿರ್ದೇಶಕ ಪ್ರೇಮ್ ಅವರು ತಮಿಳುನಾಡಿನಲ್ಲಿಯೇ ತಿರುಗೇಟು ನೀಡಿದ್ದಾರೆ.

ಚೆನ್ನೈನಲ್ಲಿ ನಡೆದ ‘ಕೆಡಿ’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಮಾತನಾಡುತ್ತ, “ನಾವೆಲ್ಲರೂ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದೇ ಕುಟುಂಬ. ಪರಸ್ಪರ ಗೌರವದಿಂದ ಹಾಗೂ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ತಾಯ್ನಾಡು ನಮಗೆ ಮಹತ್ವವಾದಷ್ಟು ನಿಮ್ಮ ತಾಯ್ನಾಡಿಗೂ ಪ್ರೀತಿ ಇದೆ. ಭಾಷಾ ವಿವಾದ ಬೇಡ” ಎಂದು ಹೇಳಿದರು.

ಪ್ರೇಮ್ ಅವರೂ ಮಾತನಾಡುತ್ತ, “ಕಮಲ್ ಹಾಸನ್ ಅವರ ಹೇಳಿಕೆಯಿಂದ ಕನ್ನಡಿಗರು ನೋವಾಗಿದ್ದಾರೆ. ಅದಕ್ಕಾಗಿಯೇ ಥಗ್ ಲೈಫ್ ಸಿನಿಮಾ ತಡೆದು, ಬೇರೆ ತಮಿಳು ಸಿನಿಮಾಗಳಿಗೆ ಅವಕಾಶ ನೀಡಿದೆ. ನಮ್ಮ ಮನಸ್ಸು ತಿಳಿದುಕೊಳ್ಳಬೇಕು” ಎಂದರು.

ಸಂಜಯ್ ದತ್ ಸಹ ಮಾತನಾಡುತ್ತ, "ನಾವೆಲ್ಲಾ ಒಂದೇ – ದಕ್ಷಿಣ, ಉತ್ತರ ಇಲ್ಲ" ಎಂಬ ಸಂದೇಶ ನೀಡಿದರು. ಇದು ಸಿನಿಮಾ ಲೋಕದಲ್ಲಿ ಬಾಂಧವ್ಯ ಬೆಳೆಸಬೇಕೆಂಬ ಧ್ರುವ ಹಾಗೂ ಪ್ರೇಮ್ ಅವರ ಮಾತಿಗೆ ಸಾರ್ಥಕತೆ ನೀಡಿತು.