"ಮಗಳಿದ್ದಾಳೆ, ಜಾಮೀನು ರದ್ದು ಮಾಡಬೇಡಿ" – ಸುಪ್ರೀಂ ಕೋರ್ಟ್‌ಗೆ ಪವಿತ್ರಾ ಗೌಡ ಭಾವನಾತ್ಮಕ ಮನವಿ!


ರೇಣುಕಾ ಸ್ವಾಮಿ ಕೊಲೆ ಪ್ರಕರಣವು ರಾಜ್ಯದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲಿ, ಪ್ರಮುಖ ಆರೋಪಿಗಳಾದ ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ ಅವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈಗ ಈ ಜಾಮೀನು ರದ್ದುಪಡಿಸಬಾರದು ಎಂಬುದಾಗಿ ಪವಿತ್ರಾ ಗೌಡ ಪರ ವಕೀಲರು ಲಿಖಿತ ಮನವಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದ ವಾದದಲ್ಲಿ ಪವಿತ್ರಾ ಗೌಡ ರೇಣುಕಾ ಸ್ವಾಮಿ ಅಪಹರಣ ಹಾಗೂ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತೀವ್ರವಾಗಿ ಆರೋಪಿಸಲಾಗಿದೆ. ಆದರೆ ಪವಿತ್ರಾ ಗೌಡ ಪರ ವಕೀಲರು ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ರೇಣುಕಾ ಸ್ವಾಮಿ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆನೆ ಎಂಬ ಸಂಗತಿಯನ್ನು ಅವರು ಮುಂಚಿತವಾಗಿ ಪ್ರಸ್ತಾಪಿಸಿದ್ದಾರೆ. ಪವಿತ್ರಾ ಗೌಡ ವಕೀಲರ ಪ್ರಕಾರ, ಘಟನೆಯ ದಿನ ಇತರ ಆರೋಪಿಗಳೊಂದಿಗೆ ಅವರ ನಡುವೆ ಯಾವುದೇ ಸಂವಹನ ನಡೆದಿಲ್ಲ. ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದಂತೆ ಪವಿತ್ರಾ ಗೌಡ ಅವರ ಪಾತ್ರವಿಲ್ಲ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಮರಣೋತ್ತರ ಪರೀಕ್ಷಾ ವರದಿಯಲ್ಲೂ ಪವಿತ್ರಾ ಗೌಡರಿಂದ ದೇಹಕ್ಕೆ ಯಾವುದೇ ಗಾಯಗಳ ಸಂಭವನೆಯಿಲ್ಲ ಎಂದು ಉಲ್ಲೇಖಿಸಲಾಗಿದೆ.
ಪವಿತ್ರಾ ಗೌಡ ತಮ್ಮ ಮನವಿಯಲ್ಲಿ “ನಾನು ಒಬ್ಬಂಟಿ ಪೋಷಕಿ, ನನ್ನ 10ನೇ ತರಗತಿಯಲ್ಲಿ ಓದುತ್ತಿರುವ ಮಗಳು, ವಯಸ್ಸಾದ ತಂದೆ-ತಾಯಿ ಈ ಎಲ್ಲರಿಗೂ ನಾನೇ ಆಧಾರ. ನನ್ನ ಬಳಿ ಯಾವುದೇ ಕ್ರಿಮಿನಲ್ ಹಿನ್ನಲೆ ಇಲ್ಲ. ನಾನು ಮಹಿಳೆ ಎಂಬ ನಿಟ್ಟಿನಲ್ಲಿ ಜಾಮೀನು ರದ್ದುಪಡಿಸುವುದು ಕಠಿಣ ಹಾಗೂ ಅನ್ಯಾಯವಾದ ಕ್ರಮವಾಗುತ್ತದೆ” ಎಂದು ಮನವಿ ಸಲ್ಲಿಸಿದ್ದಾರೆ.
ಪವಿತ್ರಾ ಗೌಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ತಿಂಗಳು ಜೈಲಿನಲ್ಲಿ ಕಳೆದಿದ್ದು, ನಂತರ ಜಾಮೀನಿನಲ್ಲಿ ಬಿಡುಗಡೆಯಾಗಿ, ತಮ್ಮ ಫ್ಯಾಷನ್ ಡಿಸೈನ್ ಸ್ಟುಡಿಯೋ ಪುನಾರಂಭಿಸಿದ್ದು, ಹೊಸ ಬದುಕಿಗೆ ಕಾಲಿಟ್ಟಿದ್ದರು. ಆದರೆ ಈಗ ಮತ್ತೆ ಜಾಮೀನು ರದ್ದಾದರೆ, ಅವರು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ. ಪವಿತ್ರಾ ಗೌಡ ಸಲ್ಲಿಸಿರುವ ಲಿಖಿತ ಮನವಿ, ಕಾನೂನು ಮತ್ತು ಮಾನವೀಯ ಅಂಶಗಳ ಮಿಶ್ರಣವಾಗಿದೆ. ಸುಪ್ರೀಂ ಕೋರ್ಟ್ ಅವರು ನೀಡಿದ ಕಾರಣಗಳನ್ನು ಪರಿಗಣಿಸಿ ಅಂತಿಮ ತೀರ್ಪು ನೀಡಬೇಕಿದೆ. ಈ ತೀರ್ಪು, ಕೇವಲ ಈ ಪ್ರಕರಣಕ್ಕೆ ಮಾತ್ರವಲ್ಲದೆ, ಭವಿಷ್ಯದಲ್ಲಿನ ಇಂತಹ ಪ್ರಕರಣಗಳಿಗೂ ತೀರ್ಮಾನಕಾರಿ ಆದರ್ಶವನ್ನಾಗಿ ಪರಿಣಮಿಸಬಹುದು.
Trending News
ಹೆಚ್ಚು ನೋಡಿವಿಷ್ಣುವರ್ಧನ್ ಸಿನಿಮಾಗೆ ಡೈರೆಕ್ಷನ್ ಕೊಡಬೇಕಿತ್ತಾ ರಮೇಶ್ ಅರವಿಂದ್? ಮಿಸ್ ಆದ ಆ ಅಪರೂಪದ ಅವಕಾಶ!

ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್: ರಿಷಬ್ ಶೆಟ್ಟಿ ನಿಜಕ್ಕೂ ಮಾಸ್ಟರ್ಪೀಸ್ ಎಂದ ಸಿಂಗರ್
