ದರ್ಶನ್ ಜಾಮೀನು ರದ್ದು ಮಾಡಬಾರದು – ಸುಪ್ರೀಂ ಕೋರ್ಟ್‌ಗೆ ಲಿಖಿತ ಕಾರಣ ನೀಡಿದ ವಕೀಲರು


‘ರೇಣುಕಾ ಸ್ವಾಮಿ ಕೊಲೆ ಪ್ರಕರಣ’ ಸದ್ಯ ಕರ್ನಾಟಕದಲ್ಲಿ ಸಕ್ಕತ್ ಸುದ್ದಿಯಲ್ಲಿದೆ. ಈ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ತೂಗುದೀಪ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ ಬಳಿಕ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಜಾಮೀನು ರದ್ದು ಪಡಿಸುವ ಅರ್ಜಿ ಸಲ್ಲಿಸಿದ್ದು, ಪ್ರಕರಣ ಇದೀಗ ಮಹತ್ವದ ಹಂತ ತಲುಪಿದೆ. ಇದೀಗ, ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಜಾಮೀನು ರದ್ದು ಮಾಡಬಾರದು ಎಂಬ ಉದ್ದೇಶದಿಂದ ಲಿಖಿತ ಕಾರಣಗಳನ್ನು ಸಲ್ಲಿಸಿದ್ದಾರೆ. ಈ ದಾಖಲೆಗಳಲ್ಲಿ ಹಲವು ಮಹತ್ವದ ಅಂಶಗಳು ಉಲ್ಲೇಖವಾಗಿದ್ದು, ನ್ಯಾಯಾಂಗ ಚರ್ಚೆಗೆ ಹೊಸ ಆಯಾಮ ತಂದುಕೊಡಲಿವೆ.
ವಕೀಲರ ಪ್ರಕಾರ, ದರ್ಶನ್ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿದ್ದು, FIR ಬೆಂಗಳೂರಿನಲ್ಲಿ ದಾಖಲಾಗಿದೆ. ಬಂಧನದ ಸಮಯದಲ್ಲಿ ಯಾವುದೇ ಕಾರಣಗಳನ್ನು 6:30ರವರೆಗೂ ಲಿಖಿತವಾಗಿ ನೀಡಲಾಗಿಲ್ಲ. ಇದು ಕಾನೂನು ಉಲ್ಲಂಘನೆ ಎಂದು ವಾದಿಸಿದ್ದಾರೆ. ದರ್ಶನ್ ಪರ ವಕೀಲರು ಬಹುಪಾಲು ಆರೋಪಗಳನ್ನು ತಳ್ಳಿಹಾಕಿದ್ದು, ಅಪಹರಣಕ್ಕೆ ದರ್ಶನ್ ಸೂಚನೆ ನೀಡಿದ್ದಾರೋ ಎಂಬುದಕ್ಕೆ ಯಾವುದೇ ನೇರ ಪುರಾವೆ ಇಲ್ಲವೆಂದು ಉಲ್ಲೇಖಿಸಿದ್ದಾರೆ. ಸಾಕ್ಷಿಗಳಾದ ಕಿರಣ್, ಮಲ್ಲಿಕಾರ್ಜುನ್ ಮತ್ತು ನರೇಂದ್ರ ಸಿಂಗ್ ಅವರ ಹೇಳಿಕೆಗಳ ಮೇಲೆ ಅನುಮಾನವಿದೆ ಎಂದು ಅವರು ಹೇಳಿದ್ದಾರೆ.
ಕಿರಣ್ ಅವರ ಹೇಳಿಕೆ ಘಟನೆ ನಡೆಯಿದ 7 ದಿನಗಳ ನಂತರ ಮಾತ್ರ ದಾಖಲಿಸಲಾಗಿದೆ, ಮಲ್ಲಿಕಾರ್ಜುನ್ ಹಾಗೂ ನರೇಂದ್ರ ಸಿಂಗ್ ಕೂಡ ಕೋರ್ಟ್‌ನಲ್ಲಿ ದರ್ಶನ್ ಹೆಸರನ್ನು ಉಲ್ಲೇಖಿಸಿಲ್ಲ. ಇವುಗಳ ಆಧಾರದ ಮೇಲೆ ಸಾಕ್ಷ್ಯಗಳ ವಿಶ್ವಾಸಾರ್ಹತೆ ಪ್ರಶ್ನಾರ್ಥಕವಾಗಿದೆ. ರಾಜ್ಯ ಸರ್ಕಾರ "ಮೂರು ಸೆಕೆಂಡಿನ ವಿಡಿಯೋ" ಅಸ್ತಿತ್ವದಲ್ಲಿದೆ ಎಂದು ಹೇಳಿದ್ದರೂ, ವಕೀಲರ ಪ್ರಕಾರ ಈ ವಿಡಿಯೋ ಚಾರ್ಜ್‌ಶೀಟ್‌ನಲ್ಲಿ ಅಥವಾ ಹೈಕೋರ್ಟ್‌ಗೆ ಸಲ್ಲಿಸಿದ ದಾಖಲೆಗಳಲ್ಲಿ ಉಲ್ಲೇಖವಾಗಿಲ್ಲ. ಇದರಿಂದಾಗಿ, ಈ ಸಾಕ್ಷ್ಯವನ್ನು ಆಧಾರವನ್ನಾಗಿ ಬಳಸುವುದು ನ್ಯಾಯಸಮ್ಮತವಲ್ಲ ಎಂದು ವಾದಿಸಿದ್ದಾರೆ.
ವಕೀಲರು, ದರ್ಶನ್ ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದ್ದು, ಜಾಮೀನು ರದ್ದಾದರೆ ಅದು ಕಠಿಣ ಕ್ರಮವಾಗಲಿದೆ ಎಂಬ ಸೂಚನೆ ನೀಡಿದ್ದಾರೆ. ದರ್ಶನ್ ಜಾಮೀನನ್ನು ರದ್ದು ಮಾಡುವ ಕುರಿತು ಸುಪ್ರೀಂ ಕೋರ್ಟ್ ಮುಂದಿನ ದಿನಗಳಲ್ಲಿ ಮಹತ್ವದ ತೀರ್ಪು ನೀಡಲಿದೆ. ರಾಜ್ಯ ಸರ್ಕಾರದ ವಾದ ಹಾಗೂ ದರ್ಶನ್ ಪರ ವಕೀಲರ ಲಿಖಿತ ಕಾರಣಗಳು ನ್ಯಾಯಾಲಯದ ವೀಕ್ಷಣೆಯಲ್ಲಿವೆ. ಪ್ರಕರಣದಲ್ಲಿ ನಿರ್ಣಾಯಕ ಹಂತ ಸಮೀಪಿಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ದೇಶದ ಚಲನಚಿತ್ರ ಪ್ರೇಕ್ಷಕರ ಗಮನವೂ ಇದೇ ಕಡೆ ನೆಟ್ಟಿದೆ.
Trending News
ಹೆಚ್ಚು ನೋಡಿವಿಷ್ಣುವರ್ಧನ್ ಸಿನಿಮಾಗೆ ಡೈರೆಕ್ಷನ್ ಕೊಡಬೇಕಿತ್ತಾ ರಮೇಶ್ ಅರವಿಂದ್? ಮಿಸ್ ಆದ ಆ ಅಪರೂಪದ ಅವಕಾಶ!

ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್: ರಿಷಬ್ ಶೆಟ್ಟಿ ನಿಜಕ್ಕೂ ಮಾಸ್ಟರ್ಪೀಸ್ ಎಂದ ಸಿಂಗರ್
