‘ಸು ಫ್ರಮ್ ಸೋ’ನಲ್ಲಿ ಭಾನು ಆಗಿ ಮೆಚ್ಚುಗೆ ಪಡೆದ ಸಂಧ್ಯಾ ಅರಕೆರೆ – ರಂಗಭೂಮಿಯಿಂದ ಚಿತ್ರರಂಗದವರೆಗೆ ಸಾಹಸ


‘ಸು ಫ್ರಮ್ ಸೋ’ ಚಿತ್ರದಲ್ಲಿ ಭಾನು ಪಾತ್ರದಿಂದ ಮನ ಗೆದ್ದಿರುವ ನಟಿ ಸಂಧ್ಯಾ ಅರಕೆರೆ, ಇದೀಗ ಕನ್ನಡ ಚಿತ್ರರಂಗದಲ್ಲಿ ಹೊಸ ಹೆಸರು ಎನಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅರಕೆರೆ ಮೂಲದ ಈ ಪ್ರತಿಭಾವಂತಿ, ರಂಗಭೂಮಿಯೊಂದಿಗೆ ಸಿನಿಮಾ ಲೋಕಕ್ಕೆ ಆಕಸ್ಮಿಕವಾಗಿ ಪ್ರವೇಶಿಸಿದರು.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ಸಣ್ಣ ಪಾತ್ರದಿಂದ ಆರಂಭಿಸಿ, ‘ಟೋಬಿ’ ಮೂಲಕ ಗಮನ ಸೆಳೆದ ಸಂಧ್ಯಾ, ಇದೀಗ ‘ಸು ಫ್ರಮ್ ಸೋ’ ಮೂಲಕ ಭಾರೀ ಯಶಸ್ಸು ಕಂಡಿದ್ದಾರೆ. ನಿರ್ದೇಶಕ ಜೆಪಿ ತುಮಿನಾಡ್ ರಚಿಸಿದ ಭಾನು ಪಾತ್ರಕ್ಕೆ ಜೀವ ತುಂಬಿದ ಈ ನಟಿ, ನಿರ್ದೇಶಕರಿಗೆ, ವಿಶೇಷವಾಗಿ ರಾಜ್ ಬಿ. ಶೆಟ್ಟಿಗೆ ಧನ್ಯವಾದ ತಿಳಿಸಿದ್ದಾರೆ.
“ಯಾವುದೂ ಪ್ಲಾನ್ ಮಾಡಿಲ್ಲ, ಲಕ್ಕಿ ಅಂತ ಅನಿಸುತ್ತದೆ” ಎಂದು ತಮ್ಮ ಜೀವನದ ಅನುಭವ ಹಂಚಿಕೊಂಡಿರುವ ಅವರು, ನೀನಾಸಂನಲ್ಲಿ ತರಬೇತಿ ಪಡೆದಿದ್ದು, ‘ಗಾಂಧಿ vs ಗಾಂಧಿ’, ‘ಅಂಬೇಡ್ಕರ್’, ‘ಸೀತಾ ಸ್ವಯಂವರ’ ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಸಿನಿಮಾ ಮಾಡೋದು ಎನ್ನುವುದು ಕೇವಲ ಶೂಟಿಂಗ್ ಅಥವಾ ರಿಲೀಸ್ ಮಾತ್ರವಲ್ಲ, ಅದು ಒಂದು ಜೀವನ ಅನುಭವ’ ಎಂಬ ರಾಜ್ ಬಿ. ಶೆಟ್ಟಿಯೊಂದಿಗೆ ಕೆಲಸ ಮಾಡುವ ಅನುಭವವನ್ನು ಹಂಚಿಕೊಂಡ ಅವರು, ತಮ್ಮ ಯಶಸ್ಸು ಎಲ್ಲರಿಗೂ ಹಂಚಿಕೊಳ್ಳಲು ಇಚ್ಛೆಪಟ್ಟಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
