Back to Top

"ಸು ಫ್ರಮ್ ಸೋ ಸೀಕ್ವೆಲ್ ಬೇಡ! ಗೆದ್ದ ಕುದುರೆಯ ಬಾಲ ಹಿಡಿಯೋದು ನಮ್ಮ ಶೈಲಿ ಅಲ್ಲ – ರಾಜ್ ಬಿ. ಶೆಟ್ಟಿ"

SSTV Profile Logo SStv July 29, 2025
‘ಸು ಫ್ರಮ್ ಸೋ’ ಸೀಕ್ವೆಲ್ ಮಾಡಲು ರಾಜ್​ ಬಿ. ಶೆಟ್ಟಿ ಅವರು ನಿರಾಕರಿಸಿದ್ದಾರೆ
‘ಸು ಫ್ರಮ್ ಸೋ’ ಸೀಕ್ವೆಲ್ ಮಾಡಲು ರಾಜ್​ ಬಿ. ಶೆಟ್ಟಿ ಅವರು ನಿರಾಕರಿಸಿದ್ದಾರೆ

ಭಾರೀ ಯಶಸ್ಸು ಕಂಡ ‘ಸು ಫ್ರಮ್ ಸೋ’ ಚಿತ್ರಕ್ಕೆ ಸೀಕ್ವೆಲ್ ಬರಬಹುದೆಂಬ ನಿರೀಕ್ಷೆ ಇದ್ದರೂ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅದನ್ನು ನಿರಾಕರಿಸಿದ್ದಾರೆ. “ಗೆದ್ದ ಕುದುರೆಯ ಬಾಲ ಹಿಡಿದು ಓಡುವುದು ನನಗೆ ಇಷ್ಟವಿಲ್ಲ,” ಎಂಬ ಸ್ಪಷ್ಟ ನಿಲುವು ಪ್ರಕಟಿಸಿರುವ ಅವರು, ಪ್ರಾಮಾಣಿಕವಾಗಿ ಹೊಸ ಕಥೆಗಳನ್ನು ಹುಡುಕಲು ನಿರ್ಧಾರ ಮಾಡಿದ್ದಾರೆ.

ಹಾಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಸೀಕ್ವೆಲ್‌ಗಳು ಟ್ರೆಂಡ್ ಆಗಿರುವಾಗಲೂ, ರಾಜ್‌ ಬಿ. ಶೆಟ್ಟಿಯ ಈ ನಿರ್ಧಾರ ಚಿತ್ರರಂಗದಲ್ಲಿ ಹೊಸ ಮಾರ್ಗದರ್ಶನ ಎನಿಸಬಹುದು. ‘ಸು ಫ್ರಮ್ ಸೋ’ ಚಿತ್ರದ ಕ್ಲೈಮ್ಯಾಕ್ಸ್‌ ಸೀಕ್ವೆಲ್‌ಗೆ ಅವಕಾಶ ನೀಡುವಂತಿದ್ದರೂ, ತಮ್ಮ ನೈತಿಕತೆಗೆ ವಿರುದ್ಧವಾಗಿದೆ ಎಂದು ಅವರು ತಿರಸ್ಕರಿಸಿದ್ದಾರೆ.

“ಮುಂದಿನ ಬಾರಿ ನಾವು ಹೊಸ ರೀತಿಯ ಚಿತ್ರ ತರುತ್ತೇವೆ. ಈ ಚಿತ್ರದ ನಿರೀಕ್ಷೆ ಹೊರತುಪಡಿಸಿ ನೋಡಿ. ಗೆಲ್ಲುತ್ತದೆಯೋ ಇಲ್ಲವೋ ನಾನೆನು ಹೇಳಲ್ಲ, ಆದರೆ ಪ್ರಾಮಾಣಿಕ ಪ್ರಯತ್ನವಂತೂ ಖಚಿತ” ಎಂದು ರಾಜ್ ಹೇಳಿದ್ದಾರೆ.

‘ಸು ಫ್ರಮ್ ಸೋ’ ಈಗಾಗಲೇ ಕರ್ನಾಟಕದಲ್ಲಿ ₹10 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಹಿಟ್ ಚಿತ್ರವಾಗಿದೆ. ಸೀಕ್ವೆಲ್ ನಿರಾಕರಣೆಗೂ ಬದಲಿ, ಹೊಸ ಕಥೆಗಾಗಿ ರಾಜ್ ಶ್ರಮಿಸುತ್ತಿರುವುದು ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ.