Back to Top

‘ಸು ಫ್ರಮ್ ಸೋ’ ಬ್ಲಾಕ್‌ಬಸ್ಟರ್ ಕಲೆಕ್ಷನ್: ಮೂರೇ ದಿನಕ್ಕೆ ‘ಎಕ್ಕ’, ‘ಜೂನಿಯರ್’ ದಾಖಲೆ ಮುರಿದು ಇತಿಹಾಸ

SSTV Profile Logo SStv July 28, 2025
‘ಸು ಫ್ರಮ್ ಸೋ’ ಬ್ಲಾಕ್‌ಬಸ್ಟರ್ ಕಲೆಕ್ಷನ್
‘ಸು ಫ್ರಮ್ ಸೋ’ ಬ್ಲಾಕ್‌ಬಸ್ಟರ್ ಕಲೆಕ್ಷನ್

ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ತೆರೆಕಂಡ ಮೂರು ದಿನಗಳಲ್ಲಿ ಭರ್ಜರಿ ಯಶಸ್ಸು ಕಂಡು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಜೆಪಿ ತುಮ್ಮಿನಾಡ ನಿರ್ದೇಶನ ಹಾಗೂ ನಾಯಕನಾಗಿ ನಟಿಸಿರುವ ಈ ಚಿತ್ರ, ‘ಎಕ್ಕ’ ಮತ್ತು ‘ಜೂನಿಯರ್’ ಚಿತ್ರಗಳ ಮೂರು ದಿನಗಳ ಬಾಕ್ಸ್ ಆಫೀಸ್ ದಾಖಲೆಯನ್ನು ಮುರಿದು ಹಾಕಿದೆ.

ಜುಲೈ 25ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ದಿನವೇ ₹78 ಲಕ್ಷ ಗಳಿಸಿ ಶುಭಾರಂಭ ಕಂಡಿತು. ಎರಡನೇ ದಿನ ₹2.17 ಕೋಟಿ ಹಾಗೂ ಮೂರನೇ ದಿನ ₹3.86 ಕೋಟಿ ಗಳಿಸಿದ್ದು, ಮೂರು ದಿನಗಳಲ್ಲೇ ₹6.81 ಕೋಟಿ ಕಲೆಕ್ಷನ್ ಸಾಧಿಸಿದೆ. ಪ್ರೀಮಿಯರ್ ಶೋ ಸೇರಿ ವಿಶ್ವಮಟ್ಟದಲ್ಲಿ ₹8 ಕೋಟಿ ದಾಟಿದೆ.

ಸಿಂಗಲ್ ಸ್ಕ್ರೀನ್‌ಗಳಿಂದ multiplex’ಗಳವರೆಗೆ ಎಲ್ಲೆಡೆ ಹೌಸ್‌ಫುಲ್ ಶೋ ಕಂಡಿರುವ ‘ಸು ಫ್ರಮ್ ಸೋ’ ಸಿನೆಮಾಕ್ಕೆ ಬಾಯ್ಮಾತಿನ ಪ್ರಚಾರವೂ ಹೆಚ್ಚಾಗಿದೆ. ಶನೀಲ್ ಗೌತಮ್, ಪ್ರಕಾಶ್ ತುಮಿನಾಡ, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕರೆ ಅಭಿನಯಿಸಿರುವ ಈ ಚಿತ್ರಕ್ಕೆ ಸುಮೇಧ್ ಕೇ ಸಂಗೀತ ನೀಡಿದ್ದಾರೆ. ನವ ನಿರ್ದೇಶಕನಿಗೆ ಅಭೂತಪೂರ್ವ ಯಶಸ್ಸು ತಂದುಕೊಟ್ಟ ‘ಸು ಫ್ರಮ್ ಸೋ’ ಈಗ ಸ್ಯಾಂಡಲ್‌ವುಡ್‌ನಲ್ಲಿ ಹಾಟ್‌ಟಾಪಿಕ್ ಆಗಿದೆ.