ಶ್ರೀಮುರಳಿಗೆ ಬರ್ತಡೇ ಗಿಫ್ಟ್ ‘ಪರಾಕ್’ ಸಿನಿಮಾ ಘೋಷಣೆ ರೋರಿಂಗ್ ಸ್ಟಾರ್ ಶ್ರೀಮುರಳಿ ಜನ್ಮದಿನದಂದು (ಡಿ.17) ಹೊಸ ಚಿತ್ರ ‘ಪರಾಕ್’ ಘೋಷಣೆಗೊಂಡಿದೆ. ಜನಪ್ರಿಯ ನಟನು ಒಂದು ಕೈಯಲ್ಲಿ ಗನ್ ಹಿಡಿದು, ಬೆನ್ನು ತೋರಿಸುತ್ತಿರುವ ಫಸ್ಟ್ ಲುಕ್ ಮೂಲಕ ಪ್ರೇಕ್ಷಕರಲ್ಲಿ ಕೌತುಕ ಮೂಡಿಸಿದ್ದಾರೆ.
ನವ ನಿರ್ದೇಶಕ ಹಾಲೇಶ್ ಕೋಗುಂಡಿ ಅವರು ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಕಿರುಚಿತ್ರಗಳಲ್ಲಿ ಅನುಭವ ಹೊಂದಿರುವ ಹಾಲೇಶ್, ‘ಪರಾಕ್’ ಮೂಲಕ ಬಹು ನಿರೀಕ್ಷಿತ ಡೆಬ್ಯೂ ಮಾಡಲು ಸಜ್ಜಾಗಿದ್ದಾರೆ.
ಮಾರ್ಚ್‌ನಲ್ಲಿ ಶೂಟಿಂಗ್ ಪ್ರಾರಂಭವಾಗಲಿರುವ ಈ ಚಿತ್ರವು ದೊಡ್ಡ ಬಜೆಟ್ ಮತ್ತು ತಾರಾಗಣದಲ್ಲಿ ನಿರ್ಮಾಣವಾಗುತ್ತಿದೆ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್‌ನಡಿ ‘ಪರಾಕ್’ ಸಿನಿಮಾ ನಿರ್ಮಿತಿಯಾಗಿದೆ. ಶ್ರೀಮುರಳಿಗೆ ಅಭಿಮಾನಿಗಳಿಂದ ಅಪಾರ ನಿರೀಕ್ಷೆಯಿರುವ ಈ ಹೊಸ ಯೋಜನೆ ಜನ್ಮದಿನದ ವಿಶೇಷ ಗಿಫ್ಟ್ ಆಗಿದೆ.