ಶ್ರೀ ವಜ್ರೇಶ್ವರಿ ಕಂಬೈನ್ಸ್‌ಗೆ 50 ವರ್ಷದ ಸುದೀರ್ಘ ಪ್ರಯಾಣ – ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಂಚಿಕೊಂಡ ವಿಶೇಷ ವಿಡಿಯೋ


ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಶ್ರೀ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ತನ್ನ 50 ವರ್ಷದ ಪ್ರಯಾಣವನ್ನು ಪೂರ್ಣಗೊಳಿಸಿದೆ. ಈ ಇತಿಹಾಸದ ಕ್ಷಣವನ್ನು ನೆನಪಿಸಿಕೊಂಡು, ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿಶೇಷ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
ಈ ಸಂಸ್ಥೆಯಿಂದ ಒಟ್ಟು 86 ಚಿತ್ರಗಳು ನಿರ್ಮಾಣವಾಗಿದ್ದು, ಅದರಲ್ಲಿ 75 ಚಿತ್ರಗಳು ಹಿಟ್ ಆಗಿವೆ. ಶಿವರಾಜ್ ಕುಮಾರ್‌ನ "ಆನಂದ್", ರಾಘವೇಂದ್ರ ರಾಜ್‌ಕುಮಾರ್‌ನ "ಚಿರಂಜೀವಿ ಸುಧಾಕರ್", ಪುನೀತ್ ರಾಜ್‌ಕುಮಾರ್‌ನ "ಅಪ್ಪು", ವಿನಯ್ ರಾಜ್‌ಕುಮಾರ್‌ನ "ಸಿದ್ಧಾರ್ಥ" ಮುಂತಾದ ವಿಭಿನ್ನ ಹಿಟ್ ಚಿತ್ರಗಳು ಈ ಸಂಸ್ಥೆಯಿಂದ ಹೊರಬಂದಿವೆ.
ಈ ಹಿಂದೆ ವಿನಯ್ ಅಭಿನಯದ “ರನ್ ಆಂಟೋನಿ” ನಂತರ ವಿಶ್ರಾಂತಿಗೆ ಹೋಗಿದ್ದ ಸಂಸ್ಥೆ, ಈಗ ಪಿ.ಆರ್.ಕೆ. ಪ್ರೊಡಕ್ಷನ್ಸ್ ಮೂಲಕ ಯುವರಾಜ್ ಕುಮಾರ್ ಅಭಿನಯದ 'ಎಕ್ಕ' ಚಿತ್ರವನ್ನು ಪ್ರಸ್ತುತ ತೆರೆಗೆ ತರುತ್ತಿದೆ.
ವಿಡಿಯೋದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಗಂಭೀರ ಮಾತುಗಳು ಮನಸನ್ನು ಸ್ಪರ್ಶಿಸುತ್ತವೆ. "ಅಪ್ಪು 25 ದಿನದ ಮಗು ಇದ್ದಾಗ ನಾನು ಪ್ರೊಡಕ್ಷನ್‌ಗೆ ಬಂದೆ" ಎಂದು ಅವರು ಎಮೋಷನಲ್ ಆಗಿ ಹೇಳಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಸಂಸ್ಥೆಯ ಹೆಮ್ಮೆ, ಇತಿಹಾಸ ಮತ್ತು ಮುಂದಿನ ಪರ್ವದ ಬಗ್ಗೆ ಶ್ರದ್ಧೆಯಿಂದ ಮಾತನಾಡಿದ್ದಾರೆ. ರಾಜ್ ಕುಟುಂಬದ ಸಪ್ನಗಳು ಮುಂದುವರಿಯುತ್ತಿರುವ ಈ ಸಂದರ್ಭ, ‘ಎಕ್ಕ’ ಚಿತ್ರದ ಬಿಡುಗಡೆ ಈ ಸಂಭ್ರಮಕ್ಕೆ ಹೊಸ ಆಯಾಮವನ್ನು ತರುತ್ತದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್‌ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
