ಶ್ರೀಲೀಲಾ ಗೆ ಬಿಗ್ ಆಫರ್ ಪೂಜಾ ಹೆಗ್ಡೆಗೆ ಠಕ್ಕರ್
SStv
December 11, 2024
ಶ್ರೀಲೀಲಾ ಗೆ ಬಿಗ್ ಆಫರ್ ಪೂಜಾ ಹೆಗ್ಡೆಗೆ ಠಕ್ಕರ್ ‘ಪುಷ್ಪ 2’ ಸಿನಿಮಾದ ಐಟಂ ಹಾಡಿನಲ್ಲಿ ಸೊಂಟ ಬಳುಕಿಸಿದ ನಂತರ ಕನ್ನಡತಿ ಶ್ರೀಲೀಲಾ ಟಾಲಿವುಡ್‌ನಲ್ಲಿ ಬಿಗ್ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ. ಪೂಜಾ ಹೆಗ್ಡೆ ನಾಯಕಿ ಪಾತ್ರಕ್ಕೆ ನಿರ್ಧಾರವಾಗಿತ್ತು ಎನ್ನಲಾದ ನಾಗಚೈತನ್ಯನ ಹೊಸ ಸಿನಿಮಾದಲ್ಲಿ ಇದೀಗ ಶ್ರೀಲೀಲಾ ಅವರನ್ನು ಫೈನಲ್ ಮಾಡಲಾಗಿದೆ ಎಂಬ ಸುದ್ದಿ ಸದ್ಯ ಟಾಲಿವುಡ್‌ನಲ್ಲಿ ಚರ್ಚೆಯ ವಿಷಯವಾಗಿದೆ.
ನಾಗಚೈತನ್ಯನ 24ನೇ ಸಿನಿಮಾದ ಈ ಬದಲಾವಣೆಯ ಮೂಲಕ ಶ್ರೀಲೀಲಾ, ಡ್ಯಾನ್ಸ್, ನಟನೆ, ಮತ್ತು ತನ್ನ ಸೌಂದರ್ಯದ ಮೂಲಕ ಟಾಲಿವುಡ್ ನ ಪ್ರೇಕ್ಷಕರ ಮನ ಗೆದ್ದಿದ್ದಾರೆ. ‘ಪುಷ್ಪ 2’ನಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಜೊತೆಗೆ ಡ್ಯಾನ್ಸ್ ಮೂಲಕ ಕ್ರಿಯೆಟ್ ಆಗಿರುವ ಹೈಪ್, ಮತ್ತು ನಿತಿನ್ ಜೊತೆಗಿನ ‘ರಾಬಿನ್‌ಹುಡ್’ ಸಿನಿಮಾದ ಬಿಡುಗಡೆ ಮುಗಿಬರುವ ಹಿನ್ನಲೆಯಲ್ಲಿ, ಶ್ರೀಲೀಲಾ ಬಹುಮುಖ್ಯ ಹೀರೋಯಿನ್‌ಗಳ ಪಟ್ಟಿಗೆ ಸೇರುತ್ತಿದ್ದಾರೆ.
ಚಿತ್ರತಂಡದ ಅಧಿಕೃತ ಘೋಷಣೆಯ ಕುರಿತು ಕಾದುನೋಡಬೇಕಾದರೂ, ಶ್ರೀಲೀಲಾ ಅಭಿಮಾನಿಗಳಿಗೆ ಇದು ಖುಷಿಯ ಸುದ್ದಿಯಾಗಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
