ಶೂಟಿಂಗ್ ಮುಗಿಸಿದ ‘ಚೌಕಿದಾರ್’ಗೆ ಕುಂಬಳಕಾಯಿ ಪ್ರಾಪ್ತಿ ಪೃಥ್ವಿ ಅಂಬಾರ್ ಮತ್ತು ಧನ್ಯಾ ರಾಮ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಚೌಕಿದಾರ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬೆಂಗಳೂರಿನ ಬಂಡೆ ಮಹಾಕಾಳಿ ದೇವಾಲಯದಲ್ಲಿ ಕಂಬಳಕಾಯಿ ಒಡೆಯಲಾಯಿತು
ಶೂಟಿಂಗ್ ಮುಗಿಸಿದ ‘ಚೌಕಿದಾರ್’ಗೆ ಕುಂಬಳಕಾಯಿ ಪ್ರಾಪ್ತಿ ಪೃಥ್ವಿ ಅಂಬಾರ್ ಮತ್ತು ಧನ್ಯಾ ರಾಮ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಚೌಕಿದಾರ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬೆಂಗಳೂರಿನ ಬಂಡೆ ಮಹಾಕಾಳಿ ದೇವಾಲಯದಲ್ಲಿ ಕಂಬಳಕಾಯಿ ಒಡೆಯಲಾಯಿತು. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗವಹಿಸಿತು.
ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರ ನಿರ್ದೇಶನದ ಈ ಚಿತ್ರ ಫ್ಯಾಮಿಲಿ ಎಮೋಷನ್ಸ್ ಮತ್ತು ಗ್ರಾಮೀಣ ಕಥಾಹಂದರವನ್ನು ಒಳಗೊಂಡಿದ್ದು, ಸಾಯಿ ಕುಮಾರ್ ಮತ್ತು ಪೃಥ್ವಿ ಅಂಬಾರ್ ತಂದೆ-ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರವು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಧನ್ಯಾ ರಾಮ್‌ಕುಮಾರ್ ಮತ್ತು ಸಾಯಿ ಕುಮಾರ್ ಅವರು ತಮ್ಮ ಅನುಭವವನ್ನು ಹಂಚಿಕೊಂಡು, ಚಿತ್ರ ತಂತ್ರಜ್ಞರು ಮತ್ತು ಕಲಾವಿದರೊಂದಿಗೆ ಕೆಲಸ ಮಾಡಿದ ಸಂತೋಷವನ್ನು ವ್ಯಕ್ತಪಡಿಸಿದರು. ಸಚಿನ್ ಬಸ್ರೂರು ಅವರ ಸಂಗೀತ, ಮತ್ತು ಸಿದ್ದು ಕಂಚನಹಳ್ಳಿ ಅವರ ಛಾಯಾಗ್ರಹಣದಿಂದ ಚಿತ್ರ ವಿಶಿಷ್ಟ ಶೈಲಿಯಲ್ಲಿ ಮೂಡಿಬಂದಿದೆ.
‘ಚೌಕಿದಾರ್’ ಟೀಸರ್ 2025ರ ಸಂಕ್ರಾಂತಿಗೆ ಬಿಡುಗಡೆಯಾಗಲಿದ್ದು, ಪೃಥ್ವಿ ಅಂಬಾರ್ ಮಾಸ್ ಲುಕ್ ಹೊಸ ಮೆಲುಕು ಸೃಷ್ಟಿಸಿದೆ.