Back to Top

ಸರ್ಜರಿಗಾಗಿ ಅಮೆರಿಕಕ್ಕೆ ಹೊರಟ ಶಿವಣ್ಣನಿಗೆ ಸುದೀಪ್ ಪ್ರೀತಿಯ ಅಪ್ಪುಗೆ

SSTV Profile Logo SStv December 18, 2024
ಶಿವಣ್ಣನಿಗೆ ಸುದೀಪ್ ಪ್ರೀತಿಯ ಅಪ್ಪುಗೆ
ಶಿವಣ್ಣನಿಗೆ ಸುದೀಪ್ ಪ್ರೀತಿಯ ಅಪ್ಪುಗೆ
ಸರ್ಜರಿಗಾಗಿ ಅಮೆರಿಕಕ್ಕೆ ಹೊರಟ ಶಿವಣ್ಣನಿಗೆ ಸುದೀಪ್ ಪ್ರೀತಿಯ ಅಪ್ಪುಗೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶಿವರಾಜ್‌ಕುಮಾರ್, ಸರ್ಜರಿಗಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಡಿಸೆಂಬರ್ 18ರಂದು ಸಂಜೆ ಮಿಯಾಮಿಗೆ ಪ್ರಯಾಣ ಬೆಳೆಸುವ ಮುನ್ನ, ಕುಟುಂಬದವರು ಮತ್ತು ಸ್ನೇಹಿತರು ಶಿವಣ್ಣನಿಗೆ ಶುಭ ಹಾರೈಸಲು ಭೇಟಿಯಾದರು. ಶಿವಣ್ಣನಿಗೆ ಸುದೀಪ್ ಅವರು ಪ್ರೀತಿಯ ಅಪ್ಪುಗೆ ಕೊಟ್ಟು ಭಾವನಾತ್ಮಕವಾಗಿ ಶುಭಾಶಯ ಕೋರಿ ಬೆಂಬಲ ವ್ಯಕ್ತಪಡಿಸಿದರು. “ನೀವು ಸಂಪೂರ್ಣ ಚೇತರಿಸಿಕೊಳ್ಳಿ” ಎಂಬ ಮಾತುಗಳೊಂದಿಗೆ ಕಿಚ್ಚ ತಮ್ಮ ಒಡನಾಟವನ್ನು ಹಂಚಿಕೊಂಡರು. ಇವರ ಸ್ನೇಹ ಮತ್ತು ಬಾಂಧವ್ಯವನ್ನು ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರಶಂಸಿಸಿದ್ದಾರೆ. ಶಿವರಾಜ್‌ಕುಮಾರ್ ಅವರು ಪುನಃ ಆರೋಗ್ಯ ವೃದ್ಧಿ ಹೊಂದಿ ವಾಪಸ್ಸು ಬರುವಂತೆ ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದಾರೆ.