Back to Top

ಚಿಕಿತ್ಸೆಗೆ ತೆರಳುತ್ತಿರುವ ಶಿವಣ್ಣನ ಭೇಟಿಯಾಗಿ ಶುಭ ಹಾರೈಸಿದ ಗಣ್ಯರು

SSTV Profile Logo SStv December 18, 2024
ಶಿವಣ್ಣನ ಭೇಟಿಯಾಗಿ ಶುಭ ಹಾರೈಸಿದ ಗಣ್ಯರು
ಶಿವಣ್ಣನ ಭೇಟಿಯಾಗಿ ಶುಭ ಹಾರೈಸಿದ ಗಣ್ಯರು
ಚಿಕಿತ್ಸೆಗೆ ತೆರಳುತ್ತಿರುವ ಶಿವಣ್ಣನ ಭೇಟಿಯಾಗಿ ಶುಭ ಹಾರೈಸಿದ ಗಣ್ಯರು ನಟ ಶಿವರಾಜ್‌ಕುಮಾರ್ ಚಿಕಿತ್ಸೆಗಾಗಿ ಇಂದು (ಡಿ.18) ಅಮೆರಿಕಗೆ ತೆರಳಿರುವ ಹಿನ್ನೆಲೆ ಬೆಂಗಳೂರಿನ ನಾಗವಾರದಲ್ಲಿರುವ ಅವರ ನಿವಾಸಕ್ಕೆ ಕಿಚ್ಚ ಸುದೀಪ್ ಮತ್ತು ಬಿ.ಸಿ ಪಾಟೀಲ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.ಇದೇ ಡಿ.24ರಂದು ಶಿವಣ್ಣಗೆ ಸರ್ಜರಿ ನಡೆಯಲಿದ್ದು, ಇಂದು ರಾತ್ರಿ ಪತ್ನಿ ಮತ್ತು ಮಗಳು ನಿವೇದಿತಾ ಜೊತೆ ಯುಎಸ್‌ಗೆ ನಟ ತೆರಳಿದ್ದಾರೆ. ಹಾಗಾಗಿ ಅವರು ವಿದೇಶಕ್ಕೆ ಹೊರಡುವ ಮುನ್ನ ಶಿವಣ್ಣ ಮನೆಗೆ ಸುದೀಪ್ ಮತ್ತು ಬಿ.ಸಿ ಪಾಟೀಲ್ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದಾರೆ.ಇನ್ನೂ ಯುಎಸ್‌ಗೆ ಹೊರಡುವ ಮುನ್ನ ಮನೆಯಲ್ಲಿ ಶಿವಣ್ಣ ದಂಪತಿಗಳಿಂದ ವಿಶೇಷ ಪೂಜೆ ಮಾಡಲಾಗಿದೆ.