Back to Top

ಉಪ್ಪಿಯ UI ಭರ್ಜರಿ ಫ್ಯಾನ್ಸ್​ ಶೋ ಶಿವಣ್ಣ ಆರೋಗ್ಯವಾಗಿ ಹಿಂದಿರಗಲೆಂದು ಥಿಯೇಟರ್​ ಮುಂದೆ ಪೂಜೆ

SSTV Profile Logo SStv December 20, 2024
ಶಿವಣ್ಣ ಆರೋಗ್ಯವಾಗಿ ಹಿಂದಿರಗಲೆಂದು ಥಿಯೇಟರ್​ ಮುಂದೆ ಪೂಜೆ
ಶಿವಣ್ಣ ಆರೋಗ್ಯವಾಗಿ ಹಿಂದಿರಗಲೆಂದು ಥಿಯೇಟರ್​ ಮುಂದೆ ಪೂಜೆ
ಉಪ್ಪಿಯ UI ಭರ್ಜರಿ ಫ್ಯಾನ್ಸ್​ ಶೋ ಶಿವಣ್ಣ ಆರೋಗ್ಯವಾಗಿ ಹಿಂದಿರಗಲೆಂದು ಥಿಯೇಟರ್​ ಮುಂದೆ ಪೂಜೆ ರಿಯಲ್ ಸ್ಟಾರ್ ಉಪೇಂದ್ರ ಅವರ ಬಹು ನಿರೀಕ್ಷಿತ ‘ಯುಐ’ ಸಿನಿಮಾ ಇಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. 3,000ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಪಡೆದುಕೊಂಡಿದೆ. ಬೆಳಗ್ಗೆ 180ಕ್ಕೂ ಹೆಚ್ಚು ಸ್ಕ್ರೀನ್​​ಗಳಲ್ಲಿ ಫ್ಯಾನ್ಸ್​​ ಶೋ ನಡೆಸಲಾಗಿದ್ದು, ಎಲ್ಲ ಶೋಗಳೂ ಹೌಸ್​ಫುಲ್​ ಆಗಿವೆ. ಉಪ್ಪಿ ಅಭಿಮಾನಿಗಳು ಸಿನಿಮಾವನ್ನು ನೋಡಿ ಫುಲ್ ಖುಷಿ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ‘ಯುಐ’ ರಿಲೀಸ್ ವೇಳೆ ಶಿವರಾಜ್ ಕುಮಾರ್ ಅವರ ಆರೋಗ್ಯಕ್ಕಾಗಿ ಥಿಯೇಟರ್​​ ಮುಂದೆ ವಿಶೇಷ ಪೂಜೆ ನಡೆದದ್ದು ವಿಶೇಷ ಗಮನಸೆಳೆಯಿತು. ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಣ್ಣ ಶೀಘ್ರ ಗುಣಮುಖರಾಗಿ ಹಿಂದಿರುಗಲೆಂದು ಅಭಿಮಾನಿಗಳು ಥಿಯೇಟರ್ ಮುಂದೆ ಹೋಮ ಹಾಗೂ ಮಂತ್ರ ಪಠಣೆ ನಡೆಸಿದರು. ಉಪ್ಪಿಯ ಸಿನಿಮಾ ರಿಲೀಸ್ ಖುಷಿಯ ಜೊತೆಗೆ ಶಿವಣ್ಣನ ಆರೋಗ್ಯ ಪ್ರಾರ್ಥನೆಯೊಂದಿಗೆ ಅಭಿಮಾನಿಗಳ ಉತ್ಸಾಹ ದ್ವಿಗುಣಗೊಂಡಿದೆ. ಅಭಿಮಾನಿಗಳ ಈ ಭಾವನೆ ಎಲ್ಲರಿಗೂ ಮೆಚ್ಚುಗೆಯಾಗಿದೆ.