Back to Top

ಶಿವಾಜಿ ಮಹಾರಾಜ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಪಾತ್ರ ಸುದೀಪ್ ಹೇಳಿಕೆ ಚರ್ಚೆಗೆ ಕಾರಣ

SSTV Profile Logo SStv December 19, 2024
ಶಿವಾಜಿ ಮಹಾರಾಜ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಪಾತ್ರ ಸುದೀಪ್ ಹೇಳಿಕೆ
ಶಿವಾಜಿ ಮಹಾರಾಜ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಪಾತ್ರ ಸುದೀಪ್ ಹೇಳಿಕೆ
ಶಿವಾಜಿ ಮಹಾರಾಜ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಪಾತ್ರ ಸುದೀಪ್ ಹೇಳಿಕೆ ಚರ್ಚೆಗೆ ಕಾರಣ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಶಿವಾಜಿ ಮಹಾರಾಜ್ ಜೀವನಾಧಾರಿತ ಚಿತ್ರದಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತಿರುವ ವಿಷಯವು ಚರ್ಚೆಗೆ ಕಾರಣವಾಗಿದೆ. ಈ ಕುರಿತಾಗಿ ಅಭಿಮಾನಿಗಳ ನಡುವೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕನ್ನಡಿಗರಾಗಿ ಶಿವಾಜಿ ಮಹಾರಾಜ್ ಪಾತ್ರ ಮಾಡುವುದೇನೂ ಸರಿಯೇ ಎಂಬ ಪ್ರಶ್ನೆಗಳು . "ಶಿವಾಜಿ ಪಾತ್ರದಲ್ಲಿ ರಿಷಬ್ ಕಾಣಿಸಿಕೊಳ್ಳುವುದು ಹೆಮ್ಮೆ ಮತ್ತು ಗೌರವದ ವಿಷಯ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದೆ. ಕೆಲವು ಜನರು "ಶಿವಾಜಿ ಕನ್ನಡಿಗರ ಪಾಲಿಗೆ ದರೋಡೆಕೋರ, ಬೆಳವಡಿ ಸಂಸ್ಥಾನದ ದುಷ್ಟ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಸುದೀಪ್ ಅವರು ಈ ವಿಷಯದ ತಲೆಮಟ್ಟವನ್ನು ಅರಿತು ಮಾತನಾಡಬೇಕಿತ್ತು ಎಂದು ಕಿಡಿಕಾರಿದ್ದಾರೆ. ಶಿವಾಜಿ ಕುರಿತಾ ನಿಲುವು ಮತ್ತು ಪಾತ್ರದ ಕುರಿತು ಕನ್ನಡಿಗರ ಪ್ರತಿಕ್ರಿಯೆ ಭಿನ್ನವಾಗಿದ್ದು, "ನಿಂತ ನೆಲಕ್ಕೆ ನಿಯತ್ತಾಗುವಂಥ ಚಿಂತನೆ ಬೆಳೆಸಿಕೊಳ್ಳಿ" ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.