Back to Top

ದರ್ಶನ್ ಸೋದರಳಿಯ ಮನೋಜ್ ಮತ್ತೆ ಹೀರೋ – ಯಾರೂ ಟಚ್ ಮಾಡದ ಕಥೆಗೆ ನಾಯಕನಾಗಿ ಎಂಟ್ರಿ!

SSTV Profile Logo SStv August 6, 2025
ಸೆಟ್ಟೇರಲಿದೆ ದರ್ಶನ್ ಸೋದರಳಿಯ ಮನೋಜ್ ಹೊಸ ಸಿನಿಮಾ ‘ಗಾರ್ಡನ್’
ಸೆಟ್ಟೇರಲಿದೆ ದರ್ಶನ್ ಸೋದರಳಿಯ ಮನೋಜ್ ಹೊಸ ಸಿನಿಮಾ ‘ಗಾರ್ಡನ್’

ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರ ಸೋದರಳಿಯ ಮನೋಜ್, ತಮ್ಮ ಹೊಸ ಚಿತ್ರ ‘ಗಾರ್ಡನ್’ಗೆ ಒಪ್ಪಿಗೆ ನೀಡಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಆರ್ಯ ಮಹೇಶ್ ಡೈರೆಕ್ಟ್ ಮಾಡಲಿದ್ದು, ಇದೊಂದು ವಿಶೇಷವಾದ, ಯಾರೂ ಸ್ಪರ್ಶಿಸದ ಕಥಾ ಹಂದರ ಹೊಂದಿದೆ ಎಂಬುದು ವಿಶೇಷ.

ಈ ಹಿಂದೆ ಚಕ್ರವರ್ತಿ, ಅಂಬರೀಶ್, ಹಾಗೂ ಟಕ್ಕರ್ ಸಿನಿಮಾಗಳಲ್ಲಿ ಕಾಣಿಸಿಕೊಂಡು ತಮ್ಮದೇ ಛಾಪು ಮೂಡಿಸಿದ ಮನೋಜ್, ಈಗ ತಾನೇ ಮುಕ್ತಾಯ ಹಂತದಲ್ಲಿರುವ ಧರಣಿ ಚಿತ್ರದ ಕೆಲಸ ಮುಗಿಸಿಕೊಂಡು ಗಾರ್ಡನ್ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ.

ಆರ್ಯ ಮಹೇಶ್, ಕೋಲಾರ ಹಾಗೂ ಇಂಗ್ಲಿಷ್ ಮಂಜ ಸಿನಿಮಾಗಳ ಮೂಲಕ ನೈಜ ಕಥೆ ಹೇಳುವಲ್ಲಿ ಖ್ಯಾತರಾಗಿದ್ದಾರೆ. ಈ ಸಲ ಸಹ ಅವರು ವಿಶಿಷ್ಟ ಕಥಾ ಹಂದರದೊಂದಿಗೆ ಬರಲಿದ್ದು, ಮನೋಜ್ ಅವರದೇನು ಫಿಕ್ಸ್ಡ್ ಇಮೇಜ್ ಇಲ್ಲದಿರುವುದು, ಈ ಪಾತ್ರಕ್ಕೆ ಪರ್ಫೆಕ್ಟ್ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ.

ಗಾರ್ಡನ್ ಚಿತ್ರದ ಚಿತ್ರೀಕರಣ ಮುಂದಿನ ತಿಂಗಳು ಬೆಂಗಳೂರು ಹಾಗೂ ಸುತ್ತಮುತ್ತ ಪ್ರಾರಂಭವಾಗಲಿದೆ. ಮನೋಜ್ ಹಾಗೂ ಚಿತ್ರತಂಡ ಇದಕ್ಕಾಗಿ ಸಜ್ಜಾಗುತ್ತಿದ್ದಾರೆ.