"ಮನೆಗೆ ಕರೆದು ದೋಸೆ ತಿನ್ನಿಸ್ತಿದ್ರು!" – ಸರೋಜಾ ದೇವಿಯ ಒಡನಾಟ ನೆನಪಿಸಿಕೊಂಡ ಜಗ್ಗೇಶ್


ಭಾರತೀಯ ಚಿತ್ರರಂಗದಲ್ಲಿ ನೂರಾರು ಚಲನಚಿತ್ರಗಳನ್ನು ಅಲಂಕರಿಸಿದ ಹಿರಿಯ ನಟಿ ಬಿ. ಸರೋಜಾ ದೇವಿ ಅವರ ನಿಧನದಿಂದ ಕನ್ನಡ ಚಿತ್ರರಂಗದಲ್ಲಿ ಶೋಕಚೇತನೆಯನ್ನುಂಟುಮಾಡಿದೆ. ಸಿನಿಮಾ ರಂಗದ ಅನೇಕ ಗಣ್ಯರು ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸುತ್ತಿರುವ ಈ ಸಮಯದಲ್ಲಿ, ಖ್ಯಾತ ನಟ ಜಗ್ಗೇಶ್ ಅವರು ತಮ್ಮ ಮತ್ತು ಸರೋಜಮ್ಮ ನಡುವಿನ ವೈಯಕ್ತಿಕ ಬಾಂಧವ್ಯದ ಕುರಿತ ನೆನಪನ್ನು ಹಂಚಿಕೊಂಡಿದ್ದಾರೆ.
“ಅವರು ನನ್ನನ್ನು ಮನೆಗೆ ಕರೆಯುತ್ತಿದ್ದರು. ಖುದ್ದಾಗಿ ದೋಸೆ ಮಾಡಿ ತಿನ್ನಿಸುತ್ತಿದ್ದರು. ಇದು ಅವರ ಅದ್ಭುತ ಹೃದಯವನ್ನೇ ತೋರಿಸುತ್ತೆ" ಎಂದು ಭಾವುಕರಾಗಿ ಹೇಳಿದರು ಜಗ್ಗೇಶ್. "ತಮಿಳುನಾಡಿನಲ್ಲಿ ಇವತ್ತು ಯಾರಾದರೂ ವಯ್ಯಾರ ಮಾಡಿದ್ರೆ ‘ಸರೋಜಾ ದೇವಿ ತರ ಮಾಡ್ತಿದ್ಯಾ?’ ಅಂತ ಕೇಳುತ್ತಾರೆ. ಅಷ್ಟರ ಮಟ್ಟಿಗೆ ಹೆಸರು ಮಾಡಿದ್ದರು,” ಎಂದರು ಅವರು. ಅವರ ಅಡಿಗೆ, ಅವರ ಆತ್ಮೀಯತೆ ಮತ್ತು ಸಾಮಾನ್ಯತೆಯ ಮಾತುಗಳನ್ನು ನೆನೆದು ಜಗ್ಗೇಶ್ ಅವರು, "ಅವರು ಎಂ.ಜಿ.ಆರ್, ಡಾ. ರಾಜ್ ಕುಮಾರ್ ಅವರ ಕಾಲದ ದಿಗ್ಗಜರು. ಅವರ ಆತ್ಮಕ್ಕೆ ಶಾಂತಿ ಸಿಗಲಿ," ಎಂದು ನಮನ ಸಲ್ಲಿಸಿದರು.
ಅಂತ್ಯಸಂಸ್ಕಾರದ ಕುರಿತು ಹೇಳಿಕೆ, ಕೊಡಿಗೆಹಳ್ಳಿಯಲ್ಲಿ ಅಂತ್ಯಸಂಸ್ಕಾರ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಅಲ್ಲಿ ಅಪಾರ್ಟ್‌ಮೆಂಟ್‌ಗಳು ಹೆಚ್ಚು ಇರುವ ಕಾರಣ, ಕೆಲವರು ಅಡಚಣೆ ಸೃಷ್ಟಿಸಬಹುದು ಎಂಬ ಆತಂಕವಿದೆ. "ಬೆರೆ ತೋಟವೊಂದೂ ಇದೆ ಎನ್ನಲಾಗುತ್ತಿದೆ, ಅಂತ್ಯಸಂಸ್ಕಾರ ಎಲ್ಲಾಗತ್ತೆ ಎಂಬುದು ಕುಟುಂಬದ ನಿರ್ಧಾರ," ಎಂದಿದ್ದಾರೆ ಜಗ್ಗೇಶ್.
ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರು ತಮ್ಮ ಅಂತಿಮ ದರ್ಶನದ ಬಳಿಕ ಹೇಳಿದರು, “ಅವರು ತಲೆ ತಟ್ಟಿ ಆಶೀರ್ವದಿಸುತ್ತಿದ್ದರು. ಅವರ ಕೆಲಸಗಳು ಸಮಾಜದಲ್ಲಿ ಸದಾ ಜೀವಂತವಾಗಿವೆ. ಅವರ ನಟನೆಗೆ ಒಂಥರ ಪವರ್ ಇತ್ತು. ಅವರ ಸಾವನ್ನು ನಾನು ಸಾವೆಂದೆನೆನೆಸಿಕೊಳ್ಳಲ್ಲ ಇದು ಅವರಿಗೆ ಹೊಸ ಹುಟ್ಟು,” ಎಂದು ಭಾವುಕರಾಗಿ ಹೇಳಿದ್ದಾರೆ. ಬಿ. ಸರೋಜಾ ದೇವಿ ಅವರು ನಟನೆಯೊಳಗೆ ಮಮತೆಯ ಮರುಗು, ನಗುಮುಖದ ಹರ್ಷ ಹಾಗೂ ಹಿರಿತನದ ಶಿಸ್ತನ್ನು ತೋರಿದ ದಿಗ್ಗಜ. ಅವರ ವ್ಯಕ್ತಿತ್ವಕ್ಕೆ ನಮನ ಸಲ್ಲಿಸುವಂತ ಮಾತುಗಳು ಕನ್ನಡದ ಹೃದಯದಲ್ಲಿ ಸದಾ ಅನುರಣಿಸುತ್ತಿರುತ್ತವೆ. ಸೀರೆಯ ಛಾಯೆ ಹೊತ್ತ ಕಲೆಯ ದೀಪವು ಈಗ ಚಿರಶಾಂತಿಗೆ ನಿದ್ರೆ ಹೋದರೂ, ಅವರ ಚಿತ್ರಗಳೊಡನೆ ಅವರು ಜೀವಂತವಾಗಿಯೇ ಉಳಿಯುತ್ತಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
